Connect with us

FILM

ಸಮಾಜವಾದಿ ಪಕ್ಷದ ಮುಖಂಡನ ಜೊತೆ ಬಾಲಿವುಡ್ ನಟಿ ಸ್ವರಾ ಭಾಸ್ಕರ ಮದುವೆ

Share Information

ಮುಂಬೈ ಫೆಬ್ರವರಿ 16: ಬಾಲಿವುಡ್ ನಟಿ ಹಾಗೂ ವಿವಾದಿತ ಟ್ವೀಟ್ ಗಳಿಂದ ಸುದ್ದಿಯಲ್ಲಿರುವ ನಟಿ ಸ್ವರಾ ಭಾಸ್ಕರ್ ಮದುವೆಯಾಗಿದ್ದಾರೆ. ಸಮಾಜಮಾದಿ ಪಕ್ಷದ ಮುಖಂಡ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿರುವುದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.


ಈ ಬಗ್ಗೆ ವಿಡಿಯೋ ಒಂದನ್ನು ಶೇರ್ ಮಾಡಿರುವ ಸ್ವರಾ ಭಾಸ್ಕರ್ ತಮ್ಮ ಮತ್ತು ಫಹಾದ್ ಅಹ್ಮದ್ ಲವ್ ಸ್ಟೋರಿ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.


ಇತರ ಬಾಲಿವುಡ್ ನಟಿಯರಂತೆ ಗ್ರ್ಯಾಂಡ್ ಆಗಿ ಮದುವೆಯಾಗದೇ ಕೋರ್ಟ್ ಮ್ಯಾರೆಜ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಜೊತೆ ಹಾರ ಬದಲಿಸಿರುವ ಪೋಟೋ ಒಂದು ಪೋಸ್ಟ್ ಮಾಡಿದ್ದಾರೆ.
2019 ರಲ್ಲಿ ಪ್ರತಿಭಟನೆಯ ಸಮಯದಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು. ನಂತರ ಅವರಿಬ್ಬರ ನಡುವೆ ಮಾತುಕತೆ ಹೆಚ್ಚಾಯಿತು,

ಈ ನಡುವೆ ಫಹಾದ್ ತನ್ನ ಸಹೋದರಿಯ ಮದುವೆಗೆ ಸ್ವರಾ ಅವರನ್ನು ಆಹ್ವಾನಿಸಿದ್ದರು, ಆದರೆ ಶೂಟಿಂಗ್‌ನಲ್ಲಿ ನಿರತರಾಗಿದ್ದರಿಂದ, ಸ್ವರಾ ಈ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ, ನಂತರ ಅವರು ಫಹಾದ್ ಅವರ ಮದುವೆಗೆ ಖಂಡಿತವಾಗಿ ಹಾಜರಾಗುವುದಾಗಿ ಭರವಸೆ ನೀಡಿದ್ದರು ಎಂದು ತಾವು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

 


Share Information
Advertisement
Click to comment

You must be logged in to post a comment Login

Leave a Reply