LATEST NEWS
ಸುವರ್ಣ ತ್ರಿಭುಜ ದೋಣಿ ದುರಂತದಲ್ಲಿ ಕಣ್ಮರೆಯಾಗಿದ್ದ ಮೀನುಗಾರರ ಕುಟುಂಬಗಳಿಗೆ 10 ಲಕ್ಷ ಹೆಚ್ಚುವರಿ ಪರಿಹಾರ

ಉಡುಪಿ ನವೆಂಬರ್ 19: ನಿಗೂಢವಾಗಿ ಕಣ್ಮರೆಯಾಗಿದ್ದ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟಿನಲ್ಲಿದ್ದ ಏಳು ಮಂದಿ ಮೀನುಗಾರ ಕುಟುಂಬಗಳಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ಘೋಷಿಸಿದೆ.
ಎರಡು ವರ್ಷಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಸುವರ್ಣ ತ್ರಿಭುಜ ಬೋಟು ಕಾಣೆಯಾಗಿತ್ತು. ಅದರಲ್ಲಿದ್ದ ಏಳು ಮಂದಿ ಮೀನುಗಾರರು ಕೂಡಾ ಕಣ್ಮರೆಯಾಗಿದ್ದರು. ಬಡ ಮೀನುಗಾರ ಕುಟುಂಬದ ಅಧಾರ ಸ್ಥಂಭಗಳೇ ಕಣ್ಮರೆಯಾಗಿತ್ತು. ಮೊದಲ ಹಂತದಲ್ಲಿ ತಲಾ 10 ಲಕ್ಷ ರುಪಾಯಿ ಪರಿಹಾರ ನೀಡಲಾಗಿತ್ತು.

ಈಗ ಎರಡನೇ ಹಂತದ ಪರಿಹಾರ ಮೊತ್ತ ನೀಡಲಾಗಿದೆ. ಏಳೂ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರುಪಾಯಿ ಘೋಷಣೆ ಮಾಡಿದ್ದಾರೆ. ಮೀನುಗಾರ ಸಮುದಾಯ ರಾಜ್ಯ ಸರ್ಕಾರದ ಈ ನೆರವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.