FILM
ಮಾಡೆಲ್ ಪೂನಂ ಪಾಂಡೆ ಸಾವಿನ ಬಗ್ಗೆ ಮೂಡುತ್ತಿರುವ ಅನುಮಾನ…!!
ಮುಂಬೈ ಫೆಬ್ರವರಿ 03: ಮಾಡೆಲ್ ಪೂನಂ ಪಾಂಡೆ ನಿನ್ನೆ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಶಾಕ್ ನೀಡಿತ್ತು, 32 ವರ್ಷದ ಪೂನಂ ಪಾಂಡೆ ಸಾವಿನ ಸುದ್ದಿ ಬಗ್ಗೆ ಇದೀಗ ಅನುಮಾನ ಮೂಡಲಾರಂಭಿಸಿದೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪೂನಂ ಪಾಂಡೆ ‘ಎಲ್ಲರಿಗೂ ಶಾಕಿಂಗ್ ನ್ಯೂಸ್ ಕೊಡ್ತಿನೀ’ ಎಂದಿದ್ದು ಇದೀಗ ಅಭಿಮಾನಿಗಳಿಗೆ ಅನುಮಾನ ಮೂಡಿಸುವಂತೆ ಮಾಡಿದೆ.
ಮಾಡೆಲ್ ಹಾಗೂ ನಟಿ ಪೂನಂ ಪಾಂಡೆ ಸಾವು ಅನೇಕರಿಗೆ ಶಾಕ್ ತಂದಿದೆ. ಅವರು ಇಲ್ಲ ಎಂಬ ವಿಚಾರವನ್ನು ಒಪ್ಪಿಕೊಳ್ಳೋಕೆ ಅಭಿಮಾನಿಗಳ ಬಳಿ ಸಾಧ್ಯವಾಗುತ್ತಿಲ್ಲ. ನಟಿಗೆ ಗರ್ಭಕಂಠ ಕ್ಯಾನ್ಸರ್ ಇತ್ತು ಎನ್ನಲಾಗಿದೆ. ಈ ಕ್ಯಾನ್ಸರ್ ಇರುವ ವ್ಯಕ್ತಿ ಏಕಾಏಕಿ ಮೃತಪಡುವುದಿಲ್ಲ. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಕ್ಯಾನ್ಸರ್ ಇರುವ ವೇಳೆ ಆಕೆ ಚಿಕಿತ್ಸೆ ಪಡೆದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಲ್ಲಿಯವರೆಗೆ ಯಾವುದೇ ಆಸ್ಪತ್ರೆ ಅಥವಾ ಪೊಲೀಸ್ ಇಲಾಖೆ ಆಕೆಯ ಸಾವಿನ ಬಗ್ಗೆ ಮಾಹಿತಿ ನೀಡಿಲ್ಲ. ಒಬ್ಬ ಸೆಲೆಬ್ರೆಟಿ ಸಾವು ಯಾವುದೇ ಸರಿಯಾದ ಮಾಹಿತಿ ಇಲ್ಲದೆ ಆಗುವುದಿಲ್ಲ ಎನ್ನುವುದು ನೆಟ್ಟಿಗರ ಪ್ರಶ್ನೆ.
ಕಳೆದ ವರ್ಷ ಪೂನಂ ಪಾಂಡೆ ಅವರು ಬ್ರೈಟ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಅವರು ಮಾತನಾಡಿದ್ದರು. ‘ನಿಮ್ಮ ಮುಂದೆ ಒಂದು ದೊಡ್ಡ ಸುದ್ದಿ ಬರುತ್ತಿದೆ. ಎಲ್ಲರಿಗೂ ಸರ್ಪ್ರೈಸ್ ಆಗಲಿದೆ. ಅಭಿಮಾನಿಗಳಿಗೆ ಸರ್ಪ್ರೈಸ್ ನೀಡೋದು ಎಂದರೆ ನನಗೆ ಖುಷಿ. ನಾನು ಬದಲಾಗಿದ್ದದೇನೆ ಎಂದು ಜನರಿಗೆ ತಿಳಿದಾಗ ಸರ್ಪ್ರೈಸ್ ಎನಿಸುತ್ತದೆ. ಶೀಘ್ರವೇ ದೊಡ್ಡ ಸುದ್ದಿ ಸಿಗಲಿದೆ. ನೀವು ಅದರ ಭಾಗವಾಗಲಿದ್ದೀರಿ. ಎಲ್ಲರಿಗೂ ಶಾಕ್ ಆಗಲಿದೆ. ನಿಮ್ಮ ಪ್ರತಿಕ್ರಿಯೆ ನೋಡಲು ಕಾದಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದರು.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೂನಂ ಸಾವಿನ ಬಗ್ಗೆ ಪೋಸ್ಟ್ ಮಾಡಲಾಗಿದೆ. ‘ನಮ್ಮ ಪ್ರೀತಿಯ ಪೂನಂನ ಕಳೆದುಕೊಂಡಿದ್ದೇವೆ’ ಎಂದು ಪೋಸ್ಟ್ ಮಾಡಲಾಗಿತ್ತು. ಇದನ್ನು ನೋಡಿ ಅನೇಕರಿಗೆ ಶಾಕ್ ಆಗಿತ್ತು. ಈ ಮೊದಲು ಪ್ರಚಾರಕ್ಕಾಗಿ ಸಾಕಷ್ಟು ವಿವಾದಗಳನ್ನು ಮಾಡಿಕೊಂಡಿದ್ದರು ಪೂನಂ. ಹೀಗಾಗಿ, ಇದು ಕೂಡ ಪಬ್ಲಿಸಿಟಿ ಸ್ಟಂಟ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಅವರ ಸಾವನ್ನು ಮ್ಯಾನೇಜರ್ ಖಚಿತಪಡಿಸಿದ್ದಾರೆ. ಆ ಬಳಿಕವೇ ಎಲ್ಲರಿಗೂ ಪೂನಂ ಪಾಂಡೆ ಸಾವಿನ ಬಗ್ಗೆ ಖಾತ್ರಿ ಆಗಿದೆ.
You must be logged in to post a comment Login