LATEST NEWS
5ನೇ ದಿನಕ್ಕೆ ಕಾಲಿರಿಸಿದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ
5ನೇ ದಿನಕ್ಕೆ ಕಾಲಿರಿಸಿದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ
ಮಂಗಳೂರು ಅಕ್ಟೋಬರ್ 26: ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ವಲು ಒತ್ತಾಯಿಸಿ ಸುರತ್ಕಲ್ ನಲ್ಲಿ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ” ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿ ಇಂದು ನಾಲ್ಕು ದಿನ ಪೂರೈಸಿತು.
ಟೋಲ್ ಗೇಟ್ ಗುತ್ತಿಗೆ ನವೀಕರಣದ ವಿರುದ್ದದ ಹೋರಾಟ ತೀವ್ರಗೊಳ್ಳುತ್ತಿರುವ ಮಧ್ಯೆಯೆ ಹೆದ್ದಾರಿ ಪ್ರಾಧಿಕಾರ ಒಂದು ವರ್ಷದ ಮಟ್ಟಿಗೆ ಟೋಲ್ ಗುತ್ತಿಗೆಯನ್ನು ಮತ್ತೊಮ್ಮೆ ನವೀಕರಿಸಿದ ಸುದ್ದಿ ಹೊರಬಿದ್ದದ್ದು ಧರಣಿ ಸ್ಥಳದಲ್ಲಿ ಆಕ್ರೋಶದ ವಾತಾವರಣವನ್ನು ಒಂಟು ಮಾಡಿತು.
ಇದೆ ಸಂದರ್ಭ ಉಸ್ತುವಾರಿ ಸಚಿವ ಯು ಟಿ ಖಾದರ್, ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳರನ್ನು ಫೋನ್ ಮೂಲಕ ಸಂಪರ್ಕಿಸಿ ಹೋರಾಟಗಾರರ ಬೇಡಿಕೆಗೆ ಸಹಾನುಭೂತಿ ವ್ಯಕ್ತಪಡಿಸಿದರು, ಜಿಲ್ಲಾಧಿಕಾರಿಗಳ ಪರವಾಗಿ ಎ ಸಿ ರವಿಚಂದ್ರ ನಾಯಕ್ ಧರಣಿ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಜನಾಭಿಪ್ರಾಯಕ್ಕೆ ವಿರುದ್ದವಾಗಿ, ನಿಯಮ ಬಾಹಿರವಾಗಿ ಟೋಲ್ ಗುತ್ತಿಗೆಯನ್ನು ಮತ್ತೊಮ್ಮೆ ನವೀಕರಿಸಿರುವುದು ಜಿಲ್ಲೆಯ ಜನರಿಗೆ ಮಾಡಿದ ಘೋರ ಅನ್ಯಾಯವಾಗಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ ಭರವಸೆಗಳೆಲ್ಲ ಸುಳ್ಳೆಂದು ಈ ಮೂಲಕ ಸಾಬೀತಾಗಿದೆ. ಸಂಸದ ನಳಿನ್ ಟೋಲ್ ಮಾಫಿಯಾದ ಕೈಗೊಂಬೆಯಾಗಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಸಂಸದರು ತನ್ನ ವೈಫಲ್ಯವನ್ನು ಒಪ್ಪಿಕೊಂಡು ರಾಜಿನಾಮೆ ನೀಡಲಿ. ಮುಂದಿನ ಹೋರಾಟ ಮಾತು ತಪ್ಪಿದ ಸಂಸದರ ವಿರುದ್ದವೇ ನಡೆಯಲಿದೆ ಎಂದರು.