LATEST NEWS
ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ದ ಅಕ್ಟೋಬರ್ 22ರ ಅನಿರ್ಧಿಷ್ಟಾವಧಿ ಧರಣಿ ಸಿದ್ದತಾ ಸಭೆ

ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ದ ಅಕ್ಟೋಬರ್ 22ರ ಅನಿರ್ಧಿಷ್ಟಾವಧಿ ಧರಣಿ ಸಿದ್ದತಾ ಸಭೆ
ಮಂಗಳೂರು ಅಕ್ಟೋಬರ್ 14: ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಇದರ ವತಿಯಿಂದ ಅಕ್ರಮ ಟೋಲ್ ಗೇಟ್ ಮುಚ್ಚಲು ಒತ್ತಾಯಿಸಿ ವಿವಿಧ ಅಕ್ಟೋಬರ್ 22 ರಿಂದ ನಡೆಯುವ ಅನಿರ್ಧಿಷ್ಟಾವಧಿ ಧರಣಿ ಸಿದ್ದತಾ ಸಭೆ, ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಸಮೀಪದ ತಡಂಬೈಲ್ ನ ಸುಪ್ರೀಮ್ ಹಾಲ್ ನಲ್ಲಿ ನಡೆಯಿತು.
ಸುರತ್ಕಲ್ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹಿಸುವುದನ್ನು ನಿಲ್ಲಿಸಿ ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸಬೇಕು” ಎಂಬ ರಾಜ್ಯ ಸರಕಾರದ ಪ್ರಸ್ತಾಪದ ಹೊರತಾಗಿಯು ಗುತ್ತಿಗೆ ನವೀಕರಿಸಲು ಮತ್ತೊಮ್ಮೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು ಅತಂಕಕಾರಿ ವಿಷಯವಾಗಿದೆ.

ಟೋಲ್ ಗೇಟ್ ಮುಚ್ಚಲು ಒತ್ತಾಯಿಸಿ ನಡೆಯುತ್ತಿರುವ ಹೋರಾಟವನ್ನು ತೀವ್ರಗೊಳಿಸುವ ಅನಿವಾರ್ಯತೆ ಎದುರಾಗಿದೆ. ಅದಕ್ಕೆ ವಿವಿಧ ಸಂಘಟನೆಗಳು ಕೂಡಾ ನಮ್ಮೊಂದಿಗೆ ಕೈ ಜೋಡಿಸಿದೆ ಎಂದು ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ವಿವರಿಸಿದರು.
ಸಭೆಯಲ್ಲಿ ಸುರತ್ಕಲ್ ಅಕ್ರಮ ಟೋಲ್ ಗೇಟ್ ಸುಂಕ ಸಂಗ್ರಹದ ಗುತ್ತಿಗೆಯನ್ನು ಮತ್ತೊಮ್ಮೆ ನವೀಕರಿಸುವ ಹೆದ್ದಾರಿ ಪ್ರಾಧಿಕಾರದ ನಿಯಮ ಬಾಹಿರ ನಿಲುವುಗಳ ವಿರುದ್ದ, ಹಾಗೂ ಹೊಸ ಸೇತುವೆ ನಿರ್ಮಾಣ ಆಗುವವರಗೆ ಕೂಳೂರು ಹಳೆ ಸೇತುವೆ ಮುಚ್ಚಬಾರದು ಎಂದು ಒತ್ತಾಯಿಸಿ ಸುರತ್ಕಲ್ ಜಂಕ್ಷನ್ ಬಳಿ ನಡೆಯುವ ಧರಣಿಯನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರು ನಿರ್ಧರಿಸಿದರು.