LATEST NEWS
ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅರ್ಜಿ – ವಿಶೇಷ ಪೀಠ ಸ್ಥಾಪನೆಗೆ ಸುಪ್ರೀಂ ಕೋರ್ಟ್ ಮುಂದು
ನವದೆಹಲಿ ಮಾರ್ಚ್ 03: ತರಗತಿಗಳಲ್ಲಿ ಹಿಜಾಬ್ ನಿಷೇಧಿಸಿರುವ ಕರ್ನಾಟಕ ರಾಜ್ಯ ಸರಕಾರದ ಆದೇಶ ವಿರುದ್ದ ಸುಪ್ರೀಂಕೋರ್ಟ್ ಮೆಟ್ಟಿಲೇರಿುವ ವಿಧ್ಯಾರ್ಥಿನಿಯರ ಅರ್ಜಿ ವಿಚಾರಣೆ ನಡೆಸಲು ಪೀಠ ರಚಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಪಿ ಎಸ್ ನರಸಿಂಹ ಅವರ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಅರ್ಜಿದಾರರ ಪರ ವಕೀಲರು ತುರ್ತಾಗಿ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಿದರು.
ಹೋಳಿ ಹಬ್ಬದ ರಜೆಯ ಬಳಿಕ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಸಿಜೆಐ ಹೇಳಿದರು. “ಐದು ದಿನಗಳ ಬಳಿಕ ಪರೀಕ್ಷೆ ನಿಗದಿಯಾಗಿದೆ” ಎಂದು ವಕೀಲರು ಪ್ರತಿಕ್ರಿಯಿಸಿದರು. ಇದಕ್ಕೆ ಸಿಜೆಐ ಅವರು “ನೀವು ಕೊನೆಯ ದಿನ ಬಂದಿದ್ದೀರಿ” ಎಂದರು. ಆಗ ವಕೀಲರು “ಇದಾಗಲೇ ಎರಡು ಬಾರಿ ಇದನ್ನು ಉಲ್ಲೇಖಿಸಲಾಗಿದೆ. 10 ದಿನಗಳ ಹಿಂದೆಯೂ ಉಲ್ಲೇಖಿಸಲಾಗಿತ್ತು” ಎಂದರು. ಈ ವೇಳೆ ಸಿಜೆಐ ಅವರು “ಪ್ರಕರಣವನ್ನು ಆಲಿಸಲು ನಾನು ಪೀಠ ರಚಿಸುತ್ತೇನೆ” ಎಂದು ಭರವಸೆ ನೀಡಿದರು.