Connect with us

    FILM

    ಮಂಗಳೂರಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್

    ಮಂಗಳೂರು ಫೆಬ್ರವರಿ 13 : ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಸಿನೆಮಾ ಶೂಟಿಂಗ್ ಗಾಗಿ ಮಂಗಳೂರಿಗೆ ಆಗಮಿಸಿದ್ದಾರೆ. ನಿನ್ನೆ ರಾತ್ರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.


    ರಜನಿಕಾಂತ್ ನಟನೆಯ ಜೈಲು ಸಿನಿಮಾದ ಶೂಟಿಂಗ್ ಗಾಗಿ ಅವರು ಮಂಗಳೂರಿಗೆ ಬಂದಿದ್ದು, ಜೊತೆಗೆ ಮಂಗಳೂರಿನ ಹಲವು ದೇವಸ್ಥಾನಗಳಿಗೂ ಅವರು ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಮಂಗಳೂರಿಗೆ ಸಿನಿಮಾ ಚಿತ್ರೀಕರಣ ನಡೆಯಲಿದೆ. ಈ ಶೂಟಿಂಗ್ ಮಧ್ಯೆಯೂ ಅವರು ಮಂಗಳೂರಿನ ಪ್ರಮುಖ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ .

     

    ನಿನ್ನೆ ರಾತ್ರಿ ಮಂಗಳೂರು ಏರ್ ಪೋರ್ಟಿಗೆ ಬಂದಾಗ ಅಸಂಖ್ಯಾತ ಅಭಿಮಾನಿಗಳು ಅವರಿಗಾಗಿ ಕಾಯುತ್ತಿದ್ದರು. ಅಭಿಮಾನಿಗಳತ್ತ ಕೈ ಬೀಸಿ ಕಾರಿನಲ್ಲಿ ರಜನಿಕಾಂತ ತೆರಳಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply