KARNATAKA
ಟಿಇಟಿ ಹಾಲ್ ಟಿಕೆಟ್ ನಲ್ಲಿ ಸನ್ನಿಲಿಯೋನ್ ಅಶ್ಲೀಲ ಚಿತ್ರ ….!!
ಶಿವಮೊಗ್ಗ ನವೆಂಬರ್ 09: ಶಿಕ್ಷಕರ ಅರ್ಹತಾ ಪರೀಕ್ಷೆ ಬರೆದ ಅಭ್ಯರ್ಥಿಯೊಬ್ಬರ ಹಾಲ್ಟಿಕೆಟ್ನಲ್ಲಿ ಪರೀಕ್ಷಾರ್ಥಿಯ ಭಾವಚಿತ್ರದ ಬದಲು ನಟಿ ಸನ್ನಿಲಿಯೊನ್ ಇರುವ ಅಶ್ಲೀಲ ಚಿತ್ರ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಕೆಲ ಮಾಧ್ಯಮಗಳಲ್ಲೂ ಈ ಸುದ್ದಿ ಪ್ರಸಾರವಾಗಿದ್ದು, ಈ ಕುರಿತ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಇಲಾಖೆ ಎಫ್ಐಆರ್ ದಾಖಲಿಸಿದೆ. ಸೂಕ್ತ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಇಲಾಖೆಯ ದೂರು ಆಧರಿಸಿ ಶಿವಮೊಗ್ಗದಲ್ಲಿ ಎಫ್ಐಆರ್ ದಾಖಲಾಗಿದೆ.
You must be logged in to post a comment Login