BANTWAL
ಕೆಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿಗೆ ಕನ್ನ ಹಾಕಿದ ಕಳ್ಳರು
ಬಂಟ್ವಾಳ ನವೆಂಬರ್ 9: ಇತಿಹಾಸ ಪ್ರಸಿದ್ದ ಕಾರಣಿಕ ಕ್ಷೇತ್ರಗಳಲ್ಲೊಂದಾದ ವೀರಕಂಬ ಗ್ರಾಮದ ಕೆಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿಯನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ.
ಕೆಲಿಂಜ ಕ್ಷೇತ್ರಕ್ಕೆ ಬಹಳ ಪುರಾತನ ಇತಿಹಾಸವಿದ್ದು ಇಲ್ಲಿ ವರ್ಷ ಪ್ರತಿ ನಡೆಯುವ ಮೆಚ್ಚಿ ಜಾತ್ರೆಗೆ ಬೇರೆ ಬೇರೆ ಊರಿನ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಈ ಮಾರ್ಗದಿಂದ ಹಾದು ಹೋಗುವ ಅನೇಕ ಭಕ್ತರು ಕ್ಷೇತ್ರದ ಎದುರು ತಮ್ಮ ವಾಹನವನ್ನು ನಿಲ್ಲಿಸಿ ಕಾಣಿಕೆ ಹಾಕಿ ಹೋಗುತ್ತಾರೆ. ನಿನ್ನೆ ರಾತ್ರಿ ಯಾರೋ ಖದೀಮರು ಕಾಣಿಕೆ ಹುಂಡಿಯನ್ನು ಕದ್ದೊಯ್ದಿದ್ದಾರೆ.
You must be logged in to post a comment Login