Connect with us

    DAKSHINA KANNADA

    ಸುಳ್ಯ – 8ನೇ ತರಗತಿ ವಿಧ್ಯಾರ್ಥಿ ಅಬೂಬಕ್ಕರ್ ಅಬೀಲ್ ನಾಪತ್ತೆ…!!

    ಸುಳ್ಯ ನವೆಂಬರ್ 18: ಎಂಟನೇ ತರಗತಿ ವಿಧಾರ್ಥಿಯೊಬ್ಬ ನಾಪತ್ತೆಯಾದ ಘಟನೆ ಪೆರುವಾಜೆ ಗ್ರಾಮದಲ್ಲಿ ನಡೆದಿದೆ. ಕುಂಡಡ್ಕ ಹನೀಪ್ ಇಂದ್ರಾಜೆ ಅವರ ಪುತ್ರ, ತಲಪಾಡಿ ಬಿಲಾಲ್ ಮಸೀದಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ಎಂಬ ಬಾಲಕ ನವೆಂಬರ್ 16 ರಿಂದ ಕಾಣೆಯಾಗಿದ್ದಾನೆ.


    ಈತ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ಮದ್ರಸ ಶಿಕ್ಷಣದ ಜತೆಗೆ ಶಾಲಾ ಶಿಕ್ಷಣ ಪಡೆಯುತಿದ್ದ. ಎಂಟನೇ ತರಗತಿಯ ವಿದ್ಯಾರ್ಥಿ ಆಗಿರುವ ಈತ ಗುರುವಾರ ಸಂಜೆ ಶಾಲೆಯಿಂದ ಮಸೀದಿಗೆ ಬಂದಿದ್ದು, ಅಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲ. ಪೋಷಕರು ಉಳ್ಳಾ ಲ ಠಾಣೆಯಲ್ಲಿ ದೂರು ನೀಡಿದ್ದು ಹುಡುಕಾಟ ನಡೆಸುತ್ತಿದ್ದಾರೆ. ಗೋಧಿ ಮೈಬಣ್ಣ ಹೊಂದಿದ್ದು ಎತ್ತರ ನಾಲ್ಕೂವರೆ ಅಡಿ ಉದ್ದವಿದ್ದು ಕಾಣಲು ಸೌಮ್ಯ ಸ್ವಭಾವದ ಬಾಲಕನಾಗಿದ್ದು ಯಾರಾದರೂ ಕಂಡು ಬಂದಲ್ಲಿ ತಕ್ಷಣ ಈ ನಂಬರಿಗೆ 9731293268, 9686123077 ಕರೆ ಮಾಡುವಂತೆ ಮನೆಯವರು ವಿನಂತಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply