ಸುಳ್ಯ ಗ್ಯಾಂಗ್ ರೇಪ್ ಪ್ರಕರಣ 3 ಆರೋಪಿಗಳ ಬಂಧನ

ಮಂಗಳೂರು ಜೂನ್ 27: ಸುಳ್ಯದ ಬೆಳ್ಳಾರೆ ಯಲ್ಲಿ ನಡೆದ ಯುವತಿಯ ಗ್ಯಾಂಗ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜೂನ್ 25 ರಂದು ಬೆಳ್ಳಾರೆಯಲ್ಲಿ ನಡೆದ ಈ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣಾ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ 3 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಮೂಡ್ನೂರು ಗ್ರಾಮ ನಿವಾಸಿಗಳಾದ ಜಯಪ್ರಕಾಶ್ ( 25), ರಂಜಿತ್ ಎನ್ ಕೆ (20 ) ಹಾಗು ರವೀಂದ್ರ(35) ಎಂದು ಗುರುತಿಸಲಾಗಿದೆ.

ಬೆಳ್ಳಾರೆಯ ಶೇಣಿ ಎಂಬಲ್ಲಿ ಜೂನ್ 25ರ ಸಂಜೆ 3.45ರ ಹೊತ್ತಿಗೆ ಮನೆಯಿಂದ ಹೊರಟ ಯುವತಿ ಹಾಲನ್ನು ಡೈರಿಗೆ ಕೊಟ್ಟು ವಾಪಸ್ ಮನೆಗೆ ಹೋಗುವ ಸಂಧರ್ಭದಲ್ಲಿ ಚೊಕ್ಕಾಡಿ ಕಡೆಯಿಂದ ಆಟೋ ಒಂದು ಬಂದಿದೆ. ಆ ಆಟೋ ದಲ್ಲಿದ್ದ ಮೂರು ಜನ ಅಪರಿಚಿತರು ಇಳಿದು ಮನೆಗೆ ವಾಪಾಸಾಗುತ್ತಿದ್ದ ಯುವತಿಯನ್ನು ಬಲವಂತವಾಗಿ ಎತ್ತಿಕೊಂಡು ರಿಕ್ಷಾದ ಒಳಗೆ ಹಾಕಿ ಚೊಕ್ಕಾಡಿ ಸಮೀಪದ ರಬ್ಬರ್ ತೋಟ ಒಂದರಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅತ್ಯಾಚಾರ ಮಾಡಿದ ವಿಚಾರವನ್ನು ಮನೆಯವರಲ್ಲಿ ತಿಳಿಸಿದರೆ ಕೊಲ್ಲುವುದಾಗಿ ಬೆದರಿಸಿ ಅದೇ ಆಟೋದಲ್ಲಿ ಶೇಣಿಗೆ ಕರೆತಂದು ಬಿಟ್ಟು ಪರಾರಿಯಾಗಿದ್ದಾರೆ.

ಈ ಕುರಿತು ಸಂತ್ರಸ್ಥ ಯುವತಿ ಬೆಳ್ಳಾರೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅತ್ಯಾಚಾರಿಗಳ ಬಂಧನಕ್ಕೆ ಕ್ಷಿಪ್ರ ಕಾರ್ಯಾಚಾರಣೆ ನಡೆಸಿದ್ದಾರೆ. ಆರೋಪಿಗಳ ಮಾಹಿತಿ ಸಂಗ್ರಹಿಸಿದ ಪೊಲೀಸರು ಚೊಕ್ಕಾಡಿಯ ಬಳಿ ಆರೋಪಿಗಳು ಪರಾರಿಯಾಗುವಾಗ ಸುತ್ತುವರಿದು ಬಂದಿಸಿದ್ದಾರೆ.

Facebook Comments

comments