ಸರಣಿ ಅಪಘಾತ ಒರ್ವನ ಸಾವು
ಮಂಗಳೂರು ಜೂನ್ 27: ಕಣ್ಣೂರು ಮಸೀದಿ ಬಳಿ ನಿಂತಿದ್ದ ಕಾರಿಗೆ ಓಲಾ ಕಾರು ಡಿಕ್ಕಿಯಾಗಿ ಒರ್ವ ಮೃತಪಟ್ಟ ಘಟನೆ ನಡೆದಿದೆ.
ಮೃತ ಯುವಕನನ್ನು ಫಾರೂಕ್ ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಇಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.

ಮುಂಜಾನೆ ಬಿರುಸಿನಿಂದ ಮಳೆ ಬರುತ್ತಿದ್ದ ಕಾರಣ ಕಣ್ಣೂರು ನಿವಾಸಿ ಫಾರೂಕ್ ಸೇರಿದಂತೆ 4 ಮಂದಿ ಕಾರನ್ನು ಹೆದ್ದಾರಿ ಸಮೀಪ ನಿಲ್ಲಿಸಿ ಮಾತುಕತೆ ನಡೆಸುತ್ತಿದ್ದರು. ಫಾರೂಕ್ ಮತ್ತು ಇನ್ನೊಬ್ಬ ವ್ಯಕ್ತಿ ಕಾರಿನ ಹಿಂಬದಿ ಕುಳಿತಿದ್ದರೆ ಮತ್ತಿಬ್ಬರು ಕಾರಿನ ಮುಂಭಾಗದಲ್ಲಿ ಕುಳಿತಿದ್ದರು.

ಬಿ.ಸಿ ರೋಡ್ ಕಡೆಯಿಂದ ವೇಗವಾಗಿ ಬಂದ ಓಲಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರುಗಳು ಚಲಿಸಿ ಕಣ್ಣೂರು ಮಸೀದಿ ಕಂಪೌಂಡ್ , ರಿಕ್ಷಾ, ಸ್ಕೂಟರ್ ಗೆ ಡಿಕ್ಕಿಯಾಗಿ ಸರಣಿ ಅಪಘಾತವಾಗಿತ್ತು. ಈ ಅಪಘಾತದ ತಿವ್ರತೆಗೆ ಎರಡು ಕಾರುಗಳು, ಬೈಕ್ ಹಾಗೂ ಆಟೋ ರಿಕ್ಷಾ ಸಂಪೂರ್ಣ ಜಖಂ ಆಗಿದೆ.
ಈ ಘಟನೆಯಲ್ಲಿ ಫಾರೂಕ್ ಸ್ಥಳದಲ್ಲಿ ಮೃತಪಟ್ಟಿದ್ದರೆ. ಗಾಯಗೊಂಡ ಹನೀಫ್, ಸಫ್ರಾಝ್ ಹಾಗೂ ತೌಸೀಫ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂದ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.