Connect with us

DAKSHINA KANNADA

ಸುಳ್ಯ – ಕುತ್ತಿಗೆ ಕೊಯ್ಯಲ್ಪಟ್ಟ ಸ್ಥಿತಿಯಲ್ಲಿ ವ್ಯಕ್ತಿ ಮೃತ ದೇಹ ಪತ್ತೆ

ಸುಳ್ಯ ಎಪ್ರಿಲ್ 17: ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹಿಂಬದಿಯಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಶವ ಕುತ್ತಿಗೆ ಕೊಯ್ಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆ ಶಂಕೆ ವ್ಯಕ್ತಪಡಿಸಲಾಗಿದೆ.


ಮೃತ ವ್ಯಕ್ತಿಯನ್ನು ಮಂಗಳೂರಿನ ಅಚ್ಚುತ ಎಂದು ಗುರುತಿಸಲಾಗಿದೆ. ರಾತ್ರಿ ಸುಮಾರು 9.15 ರ ವೇಳೆಗೆ ವ್ಯಕ್ತಿಯೊಬ್ಬರು ಬಸ್ ನಿಲ್ದಾಣದ ಟಾಯ್ಲೆಟ್ ಹಿಂಬದಿಯಲ್ಲಿ ಬಿದ್ದುಕೊಂಡಿರುವ ಬಗ್ಗೆ ಬಸ್ ನಿಲ್ದಾಣದ ಟಿ.ಸಿ.ಯವರು ಪೋಲೀಸರಿಗೆ ಮಾಹಿತಿ ನೀಡಿದರು. ಪೋಲೀಸರು ಬಂದು ನೋಡಿದಾಗ ಆ ವ್ಯಕ್ತಿ ಸಾವಿಗೀಡಾಗಿರುವುದು ತಿಳಿದು ಬಂದಿದೆ.

ಈ ವ್ಯಕ್ತಿಯ ಸಾವು ಹೇಗೆ ಸಂಭವಿಸಿತೆಂಬುದು ಖಚಿತ ಮಾಹಿತಿ ಲಭ್ಯವಾಗಿಲ್ಲ. ಇದು ಕೊಲೆಯೇ ಆತ್ಮಹತ್ಯೆಯೇ ಅಥವಾ ಬೇರೆ ಏನಾದರೂ ರೀತಿಯಲ್ಲಿ ಸಾವು ಸಂಭವಿಸಿರಬಹುದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.