Connect with us

LATEST NEWS

ಕೇರಳ ಮೀನುಗಾರಿಗಾ ಬೋಟ್ ದುರಂತ – ಮೂರು ಮೀನುಗಾರರ ಮೃತದೇಹ ಪತ್ತೆ

ಮಂಗಳೂರು ಎಪ್ರಿಲ್ 17: ಮಂಗಳೂರಿನ ಸುರತ್ಕಲ್ ಲೈಟ್‌ಹೌಸ್‌ನಿಂದ 42 ನಾಟಿಕಲ್ ಮೈಲಿ ದೂರದ ಅರಬ್ಬಿ ಸಮುದ್ರದಲ್ಲಿ ಸೋಮವಾರ ತಡರಾತ್ರಿ ನಡೆದ ಬೋಟ್ ಅಪಘಾತದಲ್ಲಿ ನಾಪತ್ತೆಯಾಗಿರುವ ಒಂಬತ್ತು ಮೀನುಗಾರರ ಮೂವರು ಮೀನುಗಾರರ ಮೃತದೇಹ ಪತ್ತೆಯಾಗಿದ್ದು, ಒಟ್ಟಾರೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.


ಏಪ್ರಿಲ್ 11 ರಂದು ಕೇರಳದ ಕೋಳಿಕ್ಕೋಡ್ ಜಿಲ್ಲೆಯ ಬೇಪೋರ್‌ನಿಂದ ರಾತ್ರಿ 11 ಗಂಟೆಗೆ ಹೊರಟ ಮೀನುಗಾರಿಕಾ ದೋಣಿಯಲ್ಲಿ 14 ಮೀನುಗಾರರು ಇದ್ದರು. ಮಂಗಳೂರು ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿರುವಾಗ  ಮಂಗಳವಾರ ಸುಮಾರು ನಸುಕಿನ ಜಾವ 2.30 ಗಂಟೆಗೆ ಸಿಂಗಾಪುರ ಮೂಲದ ಹಡಗಿಗೆ ದೋಣಿ ಡಿಕ್ಕಿ ಹೊಡೆದಿತ್ತು. ಪರಿಣಾಮ ಮೂವರು ಮೃತಪಟ್ಟಿದ್ದು, ಇಬ್ಬರನ್ನು ರಕ್ಷಿಸಲಾಗಿತ್ತು. ಈ ಪೈಕಿ 9 ಮಂದಿ ನಾಪತ್ತೆಯಾಗಿದ್ದರು.


ನೌಕಾಪಡೆ,ಕೋಸ್ಟ್‌ಗಾರ್ಡ್‌ ಹಾಗೂ ಕೇರಳದ ಮುಳುಗು ತಜ್ಞರ ಪಡೆ ಮುಳುಗಡೆಯಾದ ದೋಣಿ ಹಾಗೂ ಸಮುದ್ರದಾಳದಲ್ಲಿ ನಿರಂತರವಾಗಿ ಶೋಧ ಮುಂದುವರಿಸಿತ್ತು. ಈ ಸಂದರ್ಭ ದೋಣಿ ಸಮೀಪವೇ ಮತ್ತೆ ಮೂವರ ಮೃತದೇಹಗಳು ಪತ್ತೆಯಾಗಿವೆ. ಮೃತದೇಹವನ್ನು ಮಂಗಳೂರಿಗೆ ತರಲಾಗಿದ್ದು, ಕೋಸ್ಟಲ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಇನ್ನೂ 6 ಮಂದಿ ನಾಪತ್ತೆಯಾಗಿದ್ದು ಅವರ ಪತ್ತೆ ಕಾರ್ಯ ಮುಂದುವರೆದಿದೆ.