Connect with us

LATEST NEWS

ಬ್ಯಾರಿಕೇಡ್ ತಪ್ಪಿಸಲು ಹೋಗಿ ನಾಲ್ವರ ಮೇಲೆ ಹರಿದ ಪಿಕಪ್.. ಓರ್ವ ಸಾವು

ಸುಳ್ಯ ಮಾರ್ಚ್ 11: ರಸ್ತೆ ಮಧ್ಯೆ ಹಾಕಲಾಗಿರುವ ವೇಗ ನಿಯಂತ್ರಕ ಬ್ಯಾರಿಕೇಡ್ ನ್ನು ತಪ್ಪಿಸಲು ಹೋಗಿ ಪಿಕಪ್ ವಾಹನ ರಸ್ತೆ ಬದಿ ಬಸ್ ಗಾಗಿ ಕಾಯುತ್ತಿದ್ದ ನಾಲ್ವರ ಮೇಲೆ ಹರಿದ ಘಟನೆ ಪೆರಾಜೆ ಎಂಬಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಒರ್ವ ಸಾವನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಮೃತರನ್ನು ದುಗ್ಗಲಡ್ಕ ನಿವಾಸಿ ಮುರ್ಷಾದ್ (33) ಎಂದು ಗುರುತಿಸಲಾಗಿದೆ. ಅಡಿಕೆ ಮರ ಕಡಿಯುವ ಕೆಲಸ ನಿರ್ವಹಿಸುತ್ತಿದ್ದ ಮುರ್ಷಾದ್ ಸ್ನೇಹಿತರಾದ ರಫೀಕ್, ಸತೀಶ್ ಹಾಗೂ ಉಮ್ಮರ್ ಎಂಬವರೊಂದಿಗೆ ಪೆರಾಜೆ ಕಲ್ಲುಚರ್ಪೆ ಬಳಿ ಬಸ್ ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್ ಗೆ ಬಡಿದು ಈ ನಾಲ್ವರ ಮೇಲೆ ಹರಿದಿದೆ.

ಗಂಭೀರ ಗಾಯಗೊಂಡವರಿಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆದರೆ ದಾರಿ ಮಧ್ಯೆ ಮುರ್ಷಾದ್ ಮೃತಪಟ್ಟಿದ್ದಾರೆ ಸ್ಥಳಕ್ಕೆ ಪೊಲೀಸರು ಭೇಟಿ ಮಾಡಿದ್ದು ಪ್ರಕರಣ ದಾಖಲಿಸಲಾಗಿದೆ.