LATEST NEWS
ಅಪ್ಪನ ಲಾರಿಯಡಿ ಸಿಲುಕಿ ಮೃತಪಟ್ಟ 8 ವರ್ಷದ ಬಾಲಕ
ಮಂಗಳೂರು ಮಾರ್ಚ್ 11: ಅಪ್ಪನ ಲಾರಿಯಡಿ ಸಿಲುಕಿ 8 ವರ್ಷದ ಬಾಲಕ ಮೃತಪಟ್ಟಿರುವ ಧಾರುಣ ಘಟನೆ ಮೂಡಬಿದಿರೆಯಲ್ಲಿ ನಿನ್ನೆ ನಡೆದಿದೆ. ಮೃತ ಬಾಲಕನನ್ನು ಉಜಿರೆ ಅತ್ತಾಜೆ ನಿವಾಸಿ ಇಬ್ರಾಹಿಂ ಇಬ್ಬಿ ಅವರ ಪುತ್ರ ಮುರ್ಷಿದ್ ಎಂದು ಗುರುತಿಸಲಾಗಿದ್ದು, ಈತ ಮದರಸಾ ಒಂದರಲ್ಲಿ ಮೂರನೇ ತರಗತಿ ಕಲಿಯುತ್ತಿದ್ದಾನೆ.
ತಂದೆ ಇಬ್ರಾಹಿಂ ಮೂಡುಬಿದಿರೆಯ ಕಲ್ಲಿನಕೋರೆಗೆ ಹೋಗುವಾಗ ಬಾಲಕ ಮುರ್ಷಿದ್ ಜತೆಗೆ ತೆರಳಿದ್ದನೆಂದು ಹೇಳಲಾಗಿದೆ. ಈ ವೇಳೆ ತಂದೆಯೇ ಲಾರಿ ಚಲಾಯಿಸಿದ ವೇಳೆ ಬಾಲಕ ಆಕಸ್ಮಿಕವಾಗಿ ಅದರ ಚಕ್ರದಡಿ ಸಿಲುಕಿ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಉಜಿರೆಯ ಕೊಟ್ರೋಡಿ ಕಾಂಪೌಂಡ್ ನ ರೈಫಾ ಗಾರ್ಡನ್ ಫ್ಲಾಟ್‌ನಲ್ಲಿ ನೆಲೆಸಿದ್ದ ದಂಪತಿಗೆ ನಾಲ್ಕು ವರ್ಷ ಪ್ರಾಯದ ಪುತ್ರಿ ಇದ್ದಾಳೆ. ಘಟನೆ ನಡೆದ ತಕ್ಷಣ ಬಾಲಕನನ್ನು ಮೂಡುಬಿದಿರೆ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅದಾಗಲೇ ಆತ ಮೃತಪಟ್ಟಿದ್ದ. ಘಟನೆ ಕುರಿತು ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.