Connect with us

LATEST NEWS

ಸುಹಾನ ಟ್ರಾವೆಲ್ಸ್ ವತಿಯಿಂದ ಹಜ್ ಯಾತ್ರಿಗಳ ಪುನರ್ ಮಿಲನ ಕಾರ್ಯಕ್ರಮ

ಮಂಗಳೂರು ಜನವರಿ 16: ಮಂಗಳೂರಿನ ಸುಹಾನ ಟ್ರಾವೆಲ್ಸ್ ವತಿಯಿಂದ ಹಜ್ ಯಾತ್ರಿಗಳ ಪುನರ್ ಮಿಲನ ಕಾರ್ಯಕ್ರಮವು ನಗರದ ಪಂಪ್‌ವೆಲ್‌ನ ಹೀರಾ ಇಂಟರ್‌ನ್ಯಾಶನಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.


ಮುಸ್ಲಿಮರು ಯಾತ್ರೆಗೈಯುವ ಪ್ರವಿತ್ರ ಹಜ್.. ಕಳೆದ ಹಾಗೂ ಈ ವರ್ಷಗಳಿಂದ ಯಾತ್ರೆಗೈದ ಮತ್ತು 2025ರಲ್ಲಿ ಹಜ್ ಯಾತ್ರೆ ಕೈಗೊಳ್ಳಲಿರುವ ಯಾತ್ರಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮವು ನಗರದ ಪಂಪ್‌ವೆಲ್‌ನ ಹೀರಾ ಇಂಟರ್‌ನ್ಯಾಶನಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಲಯವು ಮಾರ್ಗಸೂಚಿಗಳ ಪ್ರಕಾರ ,ಮುಂಬರುವ ಹಜ್ ಸೀಸನ್‌ಗಾಗಿ ಸುಹಾನ ಸಂಸ್ಥೆಗೆ ಅಧಿಕೃತ ಅನುಮೋದನೆ ಸಿಕ್ಕಿರುವುದು, ಇದನ್ನ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಬಿಡುಗಡೆಗೊಳಿಸಿದರು. ಇದೇ ವೇಳೆ ಯು.ಟಿ.ಖಾದರ್ ಅವರು ಮಾತನಾಡಿ, ಸುಹಾನ ಟ್ರಾವೆಲ್ಸ್ ತನ್ನ ವ್ಯವಹಾರದಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಕೆಲ್ಸ ಅತ್ಯುತ್ತಮವಾದ್ದು, ಎಲ್ಲರೂ ಕೂಡ ಸುರಕ್ಷಿತವಾಗಿ ಹೋಗಿ ಬನ್ನಿ ಎಂದು ಆಶಿಸಿದರು.


ಅಮನ್ ಟೂರ್‍ಸ್ ಮತ್ತು ಟಾವೆಲ್ಸ್ ವಿಟ್ಲ ಹಾಗೂ ಮುಖ್ಯ ಮಾರ್ಗದರ್ಶಿ ಅಬ್ದುಲ್ ಹಮೀದ್ ಬಖಾವಿ ಅವರು ಚಾಲನೆ ನೀಡಿದ್ರು. ಬಳಿಕ ಮಾತನಾಡಿ, ಮುಸ್ಲಿಮರು ಹಜ್‌ಯಾತ್ರೆ ಕೈಗೊಳ್ಳುವುದು ಪುಣ್ಯ ಕೆಲಸವಾಗಿದೆ. ಸುಹಾನ ಟ್ರಾವೆಲ್ಸ್ ಮೂಲಕ ಹಜ್ ಯಾತ್ರೆ ಕೈಗೊಳ್ಳುವ ಮೂಲಕ ಪುಣ್ಯ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.


ಸಾಮಾಜಿಕ ಕಾರ್ಯಕರ್ತರಾದ ಝಕೀರ್ ಇಕ್ಲಾಸ್ ಉಳ್ಳಾಲ ಅವರು ಪ್ರಾಸ್ತಾವಿಕ ಹಾಗೂ ಸ್ವಾಗತಿಸಿದರು. ಸುಹಾನ ಟ್ರಾವೆಲ್ಸ್ ಆಡಳಿತ ನಿರ್ದೇಶಕರಾದ ಸೈಯದ್ ಅನ್ಸಾರ್ ತಂಙಳ್ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸೈಯದ್ ಅಫಾನ್ ಆಲಿ ಅವರು ಪವಿತ್ರ ಕುರಾನ್‌ನ ಸೂಕ್ತಗಳನ್ನು ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಈ ವೇಳೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಸಿಂಡಿಕೇಟ್ ಸದಸ್ಯರಾದ ಡಾ. ಯು.ಟಿ.ಇಫ್ತಿಕಾರ್ , ಸುಹಾನ ಟ್ರಾವೆಲ್ಸ್‌ನ ಜನಾಬ್ ಸೈಯದ್ ಯಹ್ಯಾ ತಂಙಳ್, ಅಲ್ವಾಫ ಟ್ರಾವೆಲ್ಸ್‌ನ ಮಾಲಕರಾದ ನಝೀರ್ ಮರವೂರು ಮೊದಲಾದವರು ಉಪಸ್ಥಿತರಿದ್ದರು. ಸುಮಾರು 5೦ಕ್ಕೂ ಅಧಿಕ ಮಂದಿ ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *