MANGALORE
ಪಂಪ್ ವೆಲ್ ಬಸ್ ನಿಲ್ದಾಣದ ಸಮಗ್ರ ವರದಿ ಸಲ್ಲಿಸಿ :ಜೆ.ಆರ್.ಲೋಬೊ

ಪಂಪ್ ವೆಲ್ ಬಸ್ ನಿಲ್ದಾಣದ ಸಮಗ್ರ ವರದಿ ಸಲ್ಲಿಸಿ :ಜೆ.ಆರ್.ಲೋಬೊ
ಮಂಗಳೂರು, ಅಕ್ಟೋಬರ್ 10:ಪಂಪ್ ವೆಲ್ ಬಸ್ ನಿಲ್ದಾಣದ ಬಗ್ಗೆ ಪ್ರಾಸ್ತಾವನೆಯ ಕುರಿತು ಸಮಗ್ರ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಂಪ್ ವೆಲ್ ಬಸ್ ನಿಲ್ದಾಣದ ಕುರಿತು ಮಾಹಿತಿ ವೀಕ್ಷಿಸಿ ಮಾತನಾಡುತ್ತಿದ್ದರು.
ಬಸ್ ನಿಲ್ದಾಣದ ಕುರಿತು ನೀಡಿರುವ ಮಾಹಿತಿ ಸಮರ್ಪಕವಾಗಿಲ್ಲ. ಇದರ ಬಗ್ಗೆ ಕೂಲಂಕಷ ಮಾಹಿತಿ ಅಗತ್ಯವಿದೆ. ಖಾಸಗಿ ಸಂಸ್ಥೆಗೆ ಮಾಹಿತಿ ಒದಗಿಸುವ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದ ಅವರು ಪ್ರಸ್ತಾವನೆಯನ್ನು ಪರಿಶೀಲಿಸಲು ಒಂದು ತಾಂತ್ರಿಕ ಸಮಿತಿಯನ್ನು ರಚಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.
