MANGALORE
ಪಂಪ್ ವೆಲ್ ಬಸ್ ನಿಲ್ದಾಣದ ಸಮಗ್ರ ವರದಿ ಸಲ್ಲಿಸಿ :ಜೆ.ಆರ್.ಲೋಬೊ
ಪಂಪ್ ವೆಲ್ ಬಸ್ ನಿಲ್ದಾಣದ ಸಮಗ್ರ ವರದಿ ಸಲ್ಲಿಸಿ :ಜೆ.ಆರ್.ಲೋಬೊ
ಮಂಗಳೂರು, ಅಕ್ಟೋಬರ್ 10:ಪಂಪ್ ವೆಲ್ ಬಸ್ ನಿಲ್ದಾಣದ ಬಗ್ಗೆ ಪ್ರಾಸ್ತಾವನೆಯ ಕುರಿತು ಸಮಗ್ರ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಂಪ್ ವೆಲ್ ಬಸ್ ನಿಲ್ದಾಣದ ಕುರಿತು ಮಾಹಿತಿ ವೀಕ್ಷಿಸಿ ಮಾತನಾಡುತ್ತಿದ್ದರು.
ಬಸ್ ನಿಲ್ದಾಣದ ಕುರಿತು ನೀಡಿರುವ ಮಾಹಿತಿ ಸಮರ್ಪಕವಾಗಿಲ್ಲ. ಇದರ ಬಗ್ಗೆ ಕೂಲಂಕಷ ಮಾಹಿತಿ ಅಗತ್ಯವಿದೆ. ಖಾಸಗಿ ಸಂಸ್ಥೆಗೆ ಮಾಹಿತಿ ಒದಗಿಸುವ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದ ಅವರು ಪ್ರಸ್ತಾವನೆಯನ್ನು ಪರಿಶೀಲಿಸಲು ಒಂದು ತಾಂತ್ರಿಕ ಸಮಿತಿಯನ್ನು ರಚಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಪ್ರಸ್ತಾವನೆ ಬಂದ ಬಳಿಕ ನಿರ್ಧಾರವನ್ನು ತೆಗೆದುಕೊಂಡು ವರದಿಯನ್ನು ಅನುಮೋದನೆ ಸಲ್ಲಿಸುವಂತೆಯೂ ಸಭೆಗೆ ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಪಂಪ್ ವೆಲ್ ಬಸ್ ನಿಲ್ದಾಣದ ವಿನ್ಯಾಸದ ಬಗ್ಗೆ ಖಾಸಗಿ ಸಂಸ್ಥೆಗಳು ನೀಡಿದ ಪ್ರಾತ್ಯಕ್ಷಿಕೆಯನ್ನು ಸಭೆಯಲ್ಲಿ ವೀಕ್ಷೀಸಲಾಯಿತು.
ಈ ಸಭೆಯಲ್ಲಿ ಮೇಯರ್ ಕವಿತಾ ಸನಿಲ್, ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್, ಆಯುಕ್ತ ನಜೀರ್ ಅಹ್ಮದ್, ನಗರಪಾಲಿಕೆ ಮುಖ್ಯಸಚೇತಕ ಎಂ.ಶಶಿಧರ್ ಹೆಗ್ಡೆ, ರವೂಫ್ ಮುಂತಾದವರಿದ್ದರು.
Facebook Comments
You may like
ಮಾರ್ಚ್ 15 ಕ್ಕೆ ಪಂಪ್ವೆಲ್ ಫ್ಲೈ ಓವರ್ ವಾಹನಗಳ ಸಂಚಾರಕ್ಕೆ ಮುಕ್ತ : ಸಂಸದ ಕಟೀಲ್
ಜೆ.ಆರ್ ಲೋಬೋ ಅವರ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಪಂಪ್ ವೆಲ್ ಸರ್ಕಲ್ ಕಾಮಗಾರಿ ವಿಳಂಬಕ್ಕೆ ಕಾರಣ- ನಳಿನ್
ಪಾಕಿಸ್ತಾನ ಪರ ಘೋಷಣೆ, ಮಾಜಿ ಶಾಸಕ ಜೆ.ಆರ್.ಲೋಬೋ ಸೇರಿದಂತೆ ಕಾಂಗ್ರೇಸ್ ಮುಖಂಡರ ವಿರುದ್ಧ ರಾಜದ್ರೋಹದ ದೂರು
ಕಾಂಗ್ರೇಸ್ ಪಕ್ಷದ ವಿಜಯೋತ್ಸವದಲ್ಲಿ ಪಾಕಿಸ್ತಾನ ಪರ ಘೋಷಣೆ ತನಿಖೆ ಆರಂಭಿಸಿದ ಪೊಲೀಸರು
ಯಾವುದೇ ಸಹಾಯ ಮಾಡದೇ ಸಂತ್ರಸ್ಥರ ಪೋಟೋ ಬಳಸಿಕೊಂಡ ಶಾಸಕ
ಹೌಸಿಂಗ್ ಫಾರ್ ಆಲ್ ಯೋಜನೆಯ ಕುರಿತು ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ- ಜೆ.ಆರ್ ಲೋಬೋ
You must be logged in to post a comment Login