Connect with us

    FILM

    ಖ್ಯಾತ ಟಿವಿ ನಿರೂಪಕಿ ಸುಬಿ ಸುರೇಶ್ ನಿಧನ

    ಕೇರಳ ಫೆಬ್ರವರಿ 22: ಮಲೆಯಾಳಂ ಖ್ಯಾತ ಟಿವಿ ನಿರೂಪಕಿ ಹಾಗೂ ನಟಿ ಸಿಬಿ ಸುರೇಶ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 41 ವರ್ಷ ವಯಸ್ಸಾಗಿತ್ತು, ಸಿಬಿ ಸುರೇಶ್ ಕಳೆದ ಕೆಲವು ತಿಂಗಳಿನಿಂದ ಯಕೃತ್ತು ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.


    ಟಿವಿ ಮತ್ತು ವೇದಿಕೆ ಕಾರ್ಯಕ್ರಮಗಳ ನಿರೂಪಣೆಗೆ ಸುಭಿ ಜನಪ್ರಿಯರಾಗಿದ್ದರು. ಧಾರಾವಾಹಿ ಮತ್ತು ಸಿನಿಮಾ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದ ಇವರಿಗೆ ಅಪಾರ ಪ್ರಮಾಣದ ಅಭಿಮಾನಿಗಳಿದ್ದಾರೆ. ಕೊಚ್ಚಿನ್ ಕಲಾಭವನ ತಂಡದಲ್ಲಿ ಮಿಮಿಕ್ರಿ ಕಲಾವಿದೆಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ಕ್ರಮೇಣ ಹಾಸ್ಯ ಕಾರ್ಯಕ್ರಮಗಳಲ್ಲಿ ಜನಪ್ರಿಯರಾದರು.

    ಅಲ್ಪಾವಧಿಯಲ್ಲಿಯೇ, ಅವರು ವಿವಿಧ ಟೆಲಿವಿಷನ್ ಚಾನೆಲ್‌ಗಳ ಲೈವ್‌ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವಷ್ಟರ ಮಟ್ಟಿಗೆ ಯಶಸ್ಸು ಸಾಧಿಸಿದರು. “ಸಿನೆಮಾಲಾ” ದಂತಹ ಪ್ರಸಿದ್ಧ ಟಿವಿ ಹಾಸ್ಯ ಸರಣಿ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದರು. 2006 ರಲ್ಲಿ “ಕನಕಸಿಂಹಾಸನಂ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸುಬಿ ಸುರೇಶ್ “ಎಲ್ಸಮ್ಮ ಎನ್ನ ಆಂಕುಟ್ಟಿ” ಮತ್ತು “ಹ್ಯಾಪಿ ಹಸ್ಬೆಂಡ್ಸ್” ಸೇರಿದಂತೆ 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣದಾದರೂ ನೆನಪಿನಲ್ಲಿ ಉಳಿಯುವಂತಹ ಪ್ರಾತಗಳಲ್ಲಿ ಕಾಣಿಸಿಕೊಂಡಿದ್ದರು. ಸುಬಿ ಸುರೇಶ್ ಅವರ ನ ನಿಧನಕ್ಕೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply