KARNATAKA
ಡಿಬಾರ್ ಮಾಡಿದ್ದಕ್ಕೆ 5 ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿನಿ

ಬೆಂಗಳೂರು ಮಾರ್ಚ್ 5: ಪರೀಕ್ಷೆ ಸಂದರ್ಭ ಕಾಪಿ ಮಾಡುತ್ತಿದ್ದಾಳೆ ಎಂದು ಡಿಬಾರ್ ಮಾಡಿದ್ದಕ್ಕೆ ಬಿಕಾಂ ವಿಧ್ಯಾರ್ಥಿನಿ ಲೇಡಿಸ್ ಪಿಜಿ ಕಟ್ಟಡದ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮರಜ್ಯೋತಿನಗರದ ನ್ಯೂ ಎಸ್ ಎನ್ ಎಸ್ ಲಕ್ಸುರಿ ಪಿಜಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಭವ್ಯ(21) ಎಂದು ಗುರುತಿಸಲಾಗಿದೆ. ಕೋರಮಂಗಲದ ಖಾಸಗಿ ಕಾಲೇಜಿನಲ್ಲಿ ಭವ್ಯ ಮೊದಲ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ಆದರೆ ನಿನ್ನೆ ನಡೆದ ಎಕ್ಸಾಂನಲ್ಲಿ ಕಾಪಿ ಮಾಡುತ್ತಿದ್ದಾಳೆಂದು ಆರೋಪಿಸಿ ಡಿಬಾರ್ ಮಾಡಿದ್ದರು.
ನಾನು ಬದುಕಲ್ಲ, ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಕಟ್ಟಡದಿಂದ ಹಾರುವ ಮುನ್ನ ಸಹೋದರಿ ದಿವ್ಯಾಗೆ ಫೋನ್ ಮಾಡಿ ಹೇಳಿಕೊಂಡಿದ್ದಾಳೆ.
