Connect with us

LATEST NEWS

ಮಣಿಪಾಲ – 1ನೇ ತರಗತಿ ವಿಧ್ಯಾರ್ಥಿನಿ ಮೇಲೆ ಬೀದಿ ನಾಯಿಗಳ ದಾಳಿ

ಉಡುಪಿ ಅಗಸ್ಟ್ 24: 1ನೇ ತರಗತಿ ವಿಧ್ಯಾರ್ಥಿನಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿ ಘಟನೆ ಮಣಿಪಾಲದಲ್ಲಿ ನಡೆದಿದೆ. ಘಟನೆಯಲ್ಲಿ ಬಾಲಕಿಯ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


ಮಣಿಪಾಲ ಶಾಲೆಯೊಂದರ ಒಂದನೇ ತರಗತಿ ವಿದ್ಯಾರ್ಥಿನಿ ಶಾಲಾ ಕಾಂಪೌಂಡ್‌ ಒಳಗಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 5ರಿಂದ 6 ಬೀದಿನಾಯಿಗಳು ಆಕೆಯ ಮೇಲೆ ಎರಗಿದೆ. ಘಟನೆಯಿಂದಾಗಿ ವಿದ್ಯಾರ್ಥಿನಿಯ ತಲೆ ಸೀಳಿದಂತಾಗಿದೆ. ಬಾಲಕಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

https://youtu.be/b6MAxqD6ics

Advertisement
Click to comment

You must be logged in to post a comment Login

Leave a Reply