Connect with us

    LATEST NEWS

    ಉಡುಪಿ – ಇಂದು ಮತ್ತು ನಾಳೆ ಬಿರುಗಾಳಿ ಸಹಿತ ಮಳೆ ಸಾಧ್ಯತೆ….!!

    ಉಡುಪಿ ಅಗಸ್ಟ್ 3: ಉಡುಪಿ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


    ಉಡುಪಿ ಜಿಲ್ಲೆಯ ಹಲವು ಸ್ಥಳಗಳಲ್ಲಿ ಅಗಸ್ಟ್ 3 ಮತ್ತು 4ರಂದು ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಸಾರ್ವಜನಿಕರು ಸಮುದ್ರ, ನದಿ ತೀರ ಪ್ರದೇಶ, ಹಳ್ಳ, ಕೊಳ್ಳಗಳಲ್ಲಿ ಇಳಿಯುವುದನ್ನು ನಿಷೇಧಿಸಿದೆ ಮತ್ತು ಅಪಾಯಕಾರಿ ಕಟ್ಟಡ, ಮರ, ಕಂಬಗಳ ಕೆಳಗೆ/ಹತ್ತಿರದಲ್ಲಿ ನಿಲ್ಲಬಾರದು. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply