Connect with us

    LATEST NEWS

    ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಕಾಂಡೋಮ್, ಅಶ್ಲೀಲ ಬರಹ ಹಾಕಿದ ಆರೋಪ: ಮೃತ ನವಾಝ್ ಕುಟುಂಬ, ಊರವರು ಹೇಳುವುದೇನು ?

    ಮಂಗಳೂರು ಎಪ್ರಿಲ್ 2: ಮಂಗಳೂರು ನಗರದ ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಕಾಂಡೋಮ್, ಅಶ್ಲೀಲ ಬರಹ ಹಾಕಿದ ಶಂಕಿತ ಆರೋಪಿ ರಕ್ತಕಾರಿ ಸತ್ತಿದ್ದ ಎಂಬ ಪೊಲೀಸ್ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಸಂಪೂರ್ಣ ಸುಳ್ಳು ಮತ್ತು ಆಧಾರ ರಹಿತ ಎಂದು ಮೃತ ನವಾಜ್ ಕುಟುಂಬಸ್ತರು ಹಾಗೂ ಸ್ನೇಹಿತರು ಸ್ಪಷ್ಟಪಡಿಸಿದ್ದಾರೆ.

    ಸಾಂಧರ್ಬಿಕ ಚಿತ್ರ

    ಸ್ಥಳೀಯ ಖಾಸಗಿ ವಾಹಿನಿಗೆ ಈ ಬಗ್ಗೆ ಮಾತನಾಡಿದ ಮೃತ ನವಾಝ್ ಯಾಯಿ ಬೀಫಾತುಮ್ಮ, ಮತ್ತು ಆತನ ಅಕ್ಕ ಝೀನತ್ ಅವರು ಪೊಲೀಸ್ ಅಧಿಕಾರಿಗಳ ಬೇಜಾಬ್ದಾರಿ ಹೇಳಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನವಾಝ್ ಏಡ್ಸ್ ಕಾಯಿಲೆಯಿಂದ ಬಳಲುತ್ತಿದ್ದು, ಅವರು 40 ದಿನಗಳ ಹಿಂದೆ ಮೃತಪಟ್ಟಿದ್ದಾರೆ. ಒಂದುವರೆ ವರ್ಷದಿಂದ ಏಡ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಅವರು , ಮನೆಯಿಂದ ಎಲ್ಲಿಗೂ ಹೋಗಲು ಅಶಕ್ತರಾಗಿದ್ದರು. 2 ವರ್ಷ ವಿದೇಶದಲ್ಲಿದ್ದ ನವಾಝ್ ಬಳಿಕ ಊರಿಗೆ ಮರಳಿದ್ದ ಆದರೆ ಅದಾಗಲೇ ಅವನನ್ನು ಮಾರಣಾಂತಿಕ ರೋದ ಹೆಚ್‌ ಐ ವಿ ಭಾದಿಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿದ್ದರೂ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆದರೆ ಮಂಗಳೂರು ಪೊಲೀಸ್ ಕಮಿಷನರ್ ಸೇರಿ ಹಿರಿಯ ಅಧಿಕಾರಿಗಳು ಆತ ದೈವ ಕ್ಷೇತ್ರಗಳ ಮಲಿನ ಮಾಡಿದ್ದ ಆರೋಪಿ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ನಿಜವಾಗಿಯೂ ಆತಂಕಕಾರಿ ಬೆಳವಣಿಗೆಯಾಗಿದೆ. ಯಾವುದೇ ಪೊಲೀಸ್ ಸಿಬಂದಿಗಳು ಅಥವಾ ಅಧಿಕಾರಿಗಳು ಮನೆಯವರನ್ನು ಇದುವರೆಗೂ ಸಂಪರ್ಕಿಸಲಿಲ್ಲ, ಯಾವುದೇ ಹೇಳಿಕೆ ಪಡೆಯಲಿಲ್ಲ ಆದರೂ ನವಾಝ್ ಹೆಸರನ್ನು ಈ ಪ್ರಕರಣದಲ್ಲಿ ಎಳೆದು ತಂದಿದ್ದಾರೆ ಇದು ನಿಜವಾಗಿಯೂ ಬೇಸರ ಮತ್ತು ಅಘಾತ ತಂದಿದೆ ಎಂದರು.


    ಕೊರಗಜ್ಜನ ಕ್ಷೇತ್ರ ಮಲಿನಗೊಳಿಸಿದ ಘಟನೆಗೆ ಸಂಬಂಧಿಸಿ ಇಬ್ಬರು ಯುವಕರು ಎಮ್ಮೆಕೆರೆಯ ಕೊರಗಜ್ಜನ ಕ್ಷೇತ್ರದಲ್ಲಿ ಹಾಜರಾಗಿ ತಪ್ಪೊಪ್ಪಿಕೊಂಡಿರುವುದನ್ನು ಆಧರಿಸಿ ಪೊಲೀಸ್ ಆಯುಕ್ತ ಶಶಿಕುಮಾರ್ ವಸ್ತುಸ್ಥಿತಿ ಅರಿತುಕೊಳ್ಳದೆ ಮಾಧ್ಯಮದ ಮುಂದೆ ಹೇಳಿಕೆ ನೀಡಿರುವ ಕ್ರಮ ಸಮರ್ಥನೀಯವಲ್ಲ. ಪೊಲೀಸ್ ಆಯುಕ್ತರು ಹೇಳಿಕೆ ನೀಡುವ ಮುನ್ನ ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಿ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ, ಕಾರ್ನಿಕಗಳ ಆಚೆಗೆ ವಸ್ತುನಿಷ್ಟ ತನಿಖೆ ನಡೆಸಿ ಕೊರಗಜ್ಜನ ಕ್ಷೇತ್ರ ಮಲಿನ ಪ್ರಕರಣದ ಹಿಂದಿರುವ ಸತ್ಯಗಳನ್ನು ಪೂರ್ಣವಾಗಿ ಹೊರ ತರಬೇಕು. ಆರೋಪಿಗಳು ದಿಢೀರ್ ತಪ್ಪೊಪ್ಪಿಗೆ ನೀಡಲು ಅಜ್ಜನ ಕ್ಷೇತ್ರಕ್ಕೆ ಆಗಮಿಸಿದುದರ ಹಿಂದೆ ಕಾಣದ ಕೈಗಳೇನಾದರು ಇದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು. ರಾಜಕೀಯ ಶಕ್ತಿಗಳಿಗೆ ಕೈ ಆಡಿಸಲು ಅವಕಾಶ ನೀಡಬಾರದು ಎಂದು ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *