LATEST NEWS
ಮಂಗಳೂರು – ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸ್ಮರಣ ಗುರು ವಂದನಾ ಕಾರ್ಯಕ್ರಮ
ಮಂಗಳೂರು : ಶ್ರೀ ಕಾಶಿ ಮಠಾಧೀಶರಾದ ಪರಮ ಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಪ್ರಯುಕ್ತ SVT VOLUNTEERS ASSOCIATION ವತಿಯಿಂದ ಶುಕ್ರವಾರ ರಂದು ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಿಂದ ಶ್ರೀ ಸ್ವಾಮೀಜಿಯವರ ಭಾವಚಿತ್ರದ ಪಲ್ಲಕಿ ಉತ್ಸವ ಭವ್ಯ ಮೆರವಣಿಗೆ ನಡೆಯಿತು.
ಶ್ರೀ ದೇವಳದ ಸ್ವಯಂಸೇವಕರು ಹಾಗೂ ಶ್ರೀ ದೇವಳದ ಭಜಕರು ಅಬಾಲ ವೃದ್ಧ ಸ್ತ್ರಿ ಪುರುಷರೊಡಗೂಡಿ ,ವಿಶೇಷ ಚಂಡೆ ವಾದ್ಯ , ವಿವಿಧ ಭಜನಾ ಮಂಡಳಿಯವರಿಂದ ಭಜನೆ ದೇವಳದಿಂದ ಹೊರಟು ಮಹಾಮಾಯ ದೇವಸ್ಥಾನ ರಸ್ತೆ , ಗದ್ದೆಕೇರಿ , ಡೊಂಗರಕೇರಿ ಕಟ್ಟೆಯ ಮೂಲಕ ಕೆನರಾ ಹೈ ಸ್ಕೂಲ್ ನ ಶ್ರೀ ಸುಕೃತಿಂದ್ರ ಕಲಾ ಮಂಟಪ ದಲ್ಲಿ ಶ್ರೀ ಸುಧೀಂದ್ರ ಸ್ಮರಣ ಗುರು ವಂದನಾ ಕಾರ್ಯಕ್ರಮ ನಡೆಯಿತು .
ಇದೇ ಸಂದರ್ಭದಲ್ಲಿ ಡಾ . ಎಂ ರಾಘವೇಂದ್ರ ಆಚಾರ್ಯ ರಿಂದ ಶ್ರೀ ಗುರು ಗುಣಗಾನ ನೆರವೇರಿತು .ಪಂಡಿತ್ ಎಂ ನರಸಿಂಹ ಆಚಾರ್ಯರಿಂದ ಧಾರ್ಮಿಕ ಕಾರ್ಯಕ್ರಗಳನ್ನು ನೆರವೇರಿಸಿದರು . ಭಾಜಕ ರೆಲ್ಲರೂ ಸೇರಿ ನಮನ ಪಠಣ , ಭಜನಾ ಸಂಕೀರ್ತನೆ ನಡೆದು , ಬಳಿಕ ಶ್ರೀಮಾನ್ ನ್ಯಾಯಸುಧಾ ವಿಶಾರದರಾದ ಪಂಡಿತ್ ರಾಘವೇಂದ್ರ ಆಚಾರ್ಯ ರವರಿಗೆ SVT VOLUNTEERS ASSOCIATION ವತಿಯಿಂದ ಸನ್ಮಾನ ಕಾರ್ಯಕ್ರಮ ಜರಗಿತು. ನರಸಿಂಹ ಭಟ್ ರವರಿಂದ ಕಾರ್ಯಕ್ರಮ ನಿರ್ವಹಿಸಿದರು . ಈ ಸಂದರ್ಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ವಿ ಕಾಮತ್ , ಉಪಾಧ್ಯಕ್ಷ ಸಾಹುಕಾರ್ ಕಿರಣ್ ಪೈ , ಕಾರ್ಯದರ್ಶಿ ಕೆ ಮಂಜುನಾಥ್ ಶೆಣೈ , ಕೋಶಾಧಿಕಾರಿ ಸುಧೀರ್ ಭಗತ್ , ಅಡಿಗೆ ದಾಮೋದರ್ಶ್ರೀ ಶೆಣೈ , ಹರೀಶ್ ಕಾಮತ್ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸತೀಶ್ ಪ್ರಭು , ಗಣೇಶ್ ಕಾಮತ್ , ಜಗನ್ನಾಥ್ ಕಾಮತ್ ಉಪಸ್ಥಿತರಿದ್ದರು .
ಚಿತ್ರ : ಮಂಜು ನೀರೇಶ್ವಾಲ್ಯ