ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆಯಲು ಶ್ರೀಲಂಕಾ ಮೂಲದ ಮಹಿಳೆ ಪ್ರಯತ್ನ

ಕೇರಳ ಜನವರಿ 4: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಈಗಾಗಲೇ ಇಬ್ಬರು ಮಹಿಳೆಯರು ಪ್ರವೇಶ ಮಾಡಿದ್ದು, ಈಗ ಮೂರನೇ ಮಹಿಳೆ ಶಬರಿಮಲೆ ಪ್ರವೇಶಕ್ಕೆ ಪ್ರಯತ್ನ ಮಾಡಿದ್ದು, ದೇವರ ದರ್ಶನ ಸಾಧ್ಯವಾಗದೇ ಹಿಂದಿರುಗಿದ್ದಾರೆ.

ಶ್ರೀಲಂಕಾ ಮೂಲದ 46 ವರ್ಷ ವಯಸ್ಸಿನ ಶಶಿಕಲಾ ತನ್ನ ಗಂಡನೊಂದಿಗೆ ಪಂಪೆಯ ಮೂಲಕ ಶಬರಿಮಲೆ ದೇವಾಲಯಕ್ಕೆ ತೆರಳಿದ್ದರು. ಶಶಿಕಲಾ ಅವರಿಗೆ ಕೇರಳ ಪೊಲೀಸರು ಮಪ್ತಿಯಲ್ಲಿ ಭದ್ರತೆ ನೀಡಿ ಶಬರಿಮಲೆ ಸನ್ನಿದಾನದ 18 ಮೆಟ್ಟಿಲವರೆಗೂ ಕರೆದುಕೊಂಡು ಹೋಗಿದ್ದರು.

ಆದರೆ ದೇವಸ್ಥಾನದಲ್ಲಿದ್ದ ಮಾಧ್ಯಮದವರ ಕಣ್ಣಿಗೆ ಶಶಿಕಲಾ ಬಿದ್ದ ನಂತರ ಪೊಲೀಸರು ಶಶಿಕಲಾ ಅವರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡದೇ ವಾಪಾಸ್ ಕರೆ ತಂದಿದ್ದಾರೆ ಎಂದು ಹೇಳಲಾಗಿದೆ. ಅಯ್ಯಪ್ಪ ದೇವರ 18 ಮೆಟ್ಟಿಲು ಸ್ಥಳದವರೆಗೆ ಶಶಿಕಲಾ ಹೋಗಿದ್ದು, ಅಯ್ಯಪ್ಪ ದರ್ಶನ ಸಾಧ್ಯವಾಗಲಿಲ್ಲ.

ನಂತರ ಶಶಿಕಲಾ ಅವರನ್ನು ಪೊಲೀಸ್ ಭದ್ರತೆಯೊಂದಿಗೆ ಪಂಪೆಗೆ ಕರೆತರಲಾಗಿದೆ. ಶಬರಿಮಲೆಗೆ ತೆರಳಿದ್ದರು ಪೊಲೀಸರು ದೇವರ ದರ್ಶನಕ್ಕೆ ಅವಕಾಶ ನೀಡಲಿಲ್ಲ ಎಂದು ಶಶಿಕಲಾ ಆರೋಪಿಸಿದ್ದಾರೆ.

Facebook Comments

comments