ತಂಗಿಯನ್ನು ಪ್ರೀತಿಸಿದ್ದಕ್ಕೆ ಪ್ರಿಯಕರ ಕಡಿದು ಕೊಲೆ

ಮಂಗಳೂರು ಜನವರಿ 4: ತಂಗಿಯನ್ನು ಪ್ರೀತಿಸಿದ್ದಕ್ಕೆ ಪ್ರಿಯಕರನ ಕಡಿದು ಕೊಲೆ ಮಾಡಿದ ಘಟನೆ ಮಂಗಳೂರಿನ ಕಾವೂರು ಬಳಿಯ ಪಂಜಿಮೊಗರಿನಲ್ಲಿ ಸಂಭವಿಸಿದೆ.

ಪಂಜಿಮೊಗರುವಿನ ನಿವಾಸಿ 26 ವರ್ಷದ ರಾಕೇಶ್ ಕೊಲೆಯಾದ ಯುವಕನಾಗಿದ್ದಾನೆ. ರಾಖೇಶ್ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು. ಈ ವಿಚಾರ ಯುವತಿಯ ಅಣ್ಣನಿಗೆ ಗೊತ್ತಾಗಿ ಯುವಕನನ್ನು ಮುಗಿಸಲು ಸ್ಕೆಚ್ ಹಾಗಿದ್ದ. ಅದೇ ರೀತಿ ಪ್ರೀತಿ ಬಗ್ಗೆ ಮಾತನಾಡಲು ಇದೆ ಎಂದು ಯುವಕನನ್ನು ಬರ ಹೇಳಿದ್ದಾನೆ. ರಾಕೇಶ್ ಬರುತ್ತಿದ್ದಂತೆ ಯುವತಿ ಸೋದರ ಮತ್ತು ತಂಡ ಮಾರಕಾಸ್ತ್ರದಿಂದ ರಾಖೇಶ್‌ ನನ್ನು ಕಡಿದು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತರಾದ ಟಿ, ಆರ್ ಸುರೇಶ್, ಡಿಸಿಪಿ ಕ್ರೈಮ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments