ಎರಡು ಸಾವಿರ ರೂಪಾಯಿ ನೋಟಿಗೂ ಬಂತು ಸಂಚಕಾರ

ನವದೆಹಲಿ ಜನವರಿ 3: ನೋಟು ಅಮಾನ್ಯೀಕರಣದ ನಂತರ ನೂತನವಾಗಿ ಚಲಾವಣೆಗೆ ಬಂದಿದ್ದ ಎರಡು ಸಾವಿರ ರೂಪಾಯಿ ನೋಟುಗಳಿಗೆ ಮತ್ತೆ ಸಂಚಕಾರ ಬಂದಿದ್ದು, ಆರ್ ಬಿಐ 2,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಧಾನವಾಗಿ ಕಡಿಮೆ ಮಾಡುವ ಉದ್ದೇಶದಿಂದ ಅವುಗಳ ಮುದ್ರಣವನ್ನು ನಿಲ್ಲಿಸಲಾಗಿದೆ. ಎಂದು ‘ದಿ ಪ್ರಿಂಟ್‌’ ವೆಬ್ ಸೈಟ್ ವರದಿ ಮಾಡಿದೆ.

ಆದರೆ ನೋಟುಗಳ ಮುದ್ರಣ ಕಡಿಮೆ ಮಾಡುತ್ತಿರುವುದು ನೋಟುಗಳ ಅಮಾನ್ಯೀಕರಣ ಎಂದಲ್ಲ, ಇವುಗಳ ಬಳಕೆಯ ಪ್ರಮಾಣವನ್ನು ಹಂತಹಂತವಾಗಿ ಶೂನ್ಯಮಟ್ಟಕ್ಕೆ ತರುವುದು ಎಂದು ಹೇಳಲಾಗಿದೆ .

2000 ಮುಖಬೆಲೆಯ ನೋಟುಗಳು ಅಕ್ರಮ ಹಣ ಸಂಗ್ರಹಣೆ ಮತ್ತು ವರ್ಗಾವಣೆಗೆ ಬಳಸಲಾಗುತ್ತಿದೆ ಎಂಬ ಅನುಮಾನದಿಂದ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎಂದು ದಿ ಪ್ರಿಂಟ್ ವೆಬ್ ಸೈಟ್ ವರದಿ ಮಾಡಿದೆ.

2,000 ನೋಟುಗಳನ್ನು ಚಲಾವಣೆಗೆ ತಂದಾಗ ಸರ್ಕಾರ, 1,000 ಮುಖಬೆಲೆಯ ನೋಟುಗಳು ಅಕ್ರಮ ಹಣ ಸಂಗ್ರಹಣೆಗೆ ದಾರಿ ಮಾಡಿವೆ ಅದನ್ನು ತಡೆಯುವ ಉದ್ದೇಶದಿಂದ ನೋಟು ಅಮಾನ್ಯೀಕರಣ ಮಾಡಿ ಹೊಸ ನೋಟು ಚಲಾವಣೆಗೆ ತರಲಾಯಿತು ಎಂದು ಹೇಳಿಕೊಂಡಿತ್ತು. ಈಗ ಮತ್ತೆ ಅದೇ ಕಾರಣ ನೀಡಿ 2,000 ನೋಟುಗಳ ಮುದ್ರಣವನ್ನು ಕಡಿಮೆಗೊಳಿಸಲಾಗುತ್ತಿದೆ.

2 Shares

Facebook Comments

comments