Connect with us

    FILM

    ಬಾತ್ ರೂಂ ನಲ್ಲಿ ಶವವಾಗಿ ಪತ್ತೆಯಾದ ಖ್ಯಾತ ಮಾಡೆಲ್ ಆದಿತ್ಯ ಸಿಂಗ್

    ಮುಂಬೈ ಮೇ 22: ಖ್ಯಾತ ಮಾಡೆಲ್ ಹಾಗೂ ಸಿನೆಮಾ ನಟ ಆದಿತ್ಯ ಸಿಂಗ್ ಮುಂಬೈ ನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.


    32 ವರ್ಷದ ಆದಿತ್ಯ ಸಿಂಗ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಮಾಡೆಲ್ ಲೋಕದಲ್ಲಿ ಜನಪ್ರಿಯತೆ ಗಳಿಸಿದ್ದ ಅವರು ಮುಂಬೈನ ಅಂಧೇರಿಯ ಅವರ ಅಪಾರ್ಟ್​ಮೆಂಟ್​ನ ಬಾತ್​ರೂಂನಲ್ಲಿ ಪತ್ತೆಯಾಗಿದೆ.

    ಆದಿತ್ಯ ಸಿಂಗ್ ಶವವನ್ನು ಮೊದಲು ಅವರ ಗೆಳೆಯ ನೋಡಿದ್ದಾರೆ. ಗೆಳೆಯ ಹಾಗೂ ಅಪಾರ್ಟ್​ಮೆಂಟ್​ನ ವಾಚ್​ಮ್ಯಾನ್ ಸೇರಿಕೊಂಡು ಆದಿತ್ಯ ಸಿಂಗ್​ ಅನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರಾದರೂ ಅಲ್ಲಿ ಅವರು ನಿಧನರಾಗಿದ್ದಾಗಿ ಘೋಷಿಸಲಾಗಿದೆ.
    ಆದಿತ್ಯ ಸಿಂಗ್, ಮಾದಕ ವಸ್ತು ಸೇವಿಸುತ್ತಿದ್ದು ಅತಿಯಾದ ಮಾದಕ ಸೇವನೆಯಿಂದ ನಿಧನ ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ ಮರಣೋತ್ತರ ಪರೀಕ್ಷೆ ಹಾಗೂ ಹೆಚ್ಚಿನ ತನಿಖೆ ಬಳಿಕವಷ್ಟೆ ನಿಜಾಂಶ ಹೊರಗೆ ಬರಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply