ಕಾಂಗ್ರೇಸ್ ಶಾಸಕರ ರಾಜೀನಾಮೆ ಸ್ಪೀಕರ್ ಊರ್ಜಿತ ಮಾಡುವುದಿಲ್ಲ – ಪರಿಷತ್ ಸದಸ್ಯ ಶರವಣ

ಮಂಗಳೂರು ಜುಲೈ 2: ಕಾಂಗ್ರೇಸ್ ನ ಎರಡು ಶಾಸಕರು ಸಲ್ಲಿಸಿದ ರಾಜೀನಾಮೆಯನ್ನು ಸ್ಪೀಕರ್ ಊರ್ಜಿತ ಮಾಡೋದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ ಶರವಣ ಸ್ಪಷ್ಟಪಡಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಿದ ಮಾದ್ಯಮಗಳ ಜೊತೆ ಮಾತನಾಡಿದ ಅವರು ಇಬ್ಬರು ಶಾಸಕರು ರಾಜೀನಾಮೆಯನ್ನು ಸಲ್ಲಿಸಬೇಕಾದ ನಿಯಮವನ್ನು ಪಾಲಿಸಿಲ್ಲ. ಈ ಕಾರಣಕ್ಕಾಗಿ ಸ್ಪೀಕರ್ ಇಬ್ಬರ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ‌.

ಇಬ್ಬರು ಶಾಸಕರನ್ನು ಮನವೊಲಿಸುವ ಕಾರ್ಯವನ್ನು ಕಾಂಗ್ರೇಸ್ ಮುಖಂಡರು ಮಾಡುತ್ತಿದ್ದಾರೆ ಎಂದ ಅವರು ಸರಕಾರ ಸುಭದ್ರವಾಗಿದ್ದು, ಐದು ವರ್ಷ ಯಾವುದೇ ಅಡ್ಡಿಯಿಲ್ಲದೆ ಪೂರೈಸುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಕಾಂಗ್ರೇಸ್ ನಾಯಕರು ಅವರ ಶಾಸಕರನ್ನು ಏನು ಮಾಡಬೇಕು ಅನ್ನೋದನ್ನ ಮಾಡ್ತಾರೆ, ಜಡಿಎಸ್ ಶಾಸಕರು ದೇವೇಗೌಡರ ಸಂಪರ್ಕದಲ್ಲಿದ್ದಾರೆ ಎಂದ ಅವರು ಸರಕಾರ ಬೀಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ತಂತ್ರ ಫಲಿಸುವುದಿಲ್ಲ. ಕುರ್ಚಿಯ ಆಸೆಗಾಗಿ ಬಿಜೆಪಿ ಪಕ್ಷದವರು ಜಪ ಮಾಡುತ್ತಿದ್ದು, ಅವರ ಆಸೆ ನೆರವೇರುವುದಿಲ್ಲ ಎಂದು ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದರು.

Facebook Comments

comments