Connect with us

LATEST NEWS

ಸಿರಿಮನೆ ಪಾಲ್ಸ್ ಬಳಿ ಯುವತಿಗೆ ಕಿಟಲೆ ಮಾಡಿದ ಯುವಕರಿಗೆ ಸ್ಥಳೀಯರ ಧರ್ಮದೇಟು

ಸಿರಿಮನೆ ಪಾಲ್ಸ್ ಬಳಿ ಯುವತಿಗೆ ಕಿಟಲೆ ಮಾಡಿದ ಯುವಕರಿಗೆ ಸ್ಥಳೀಯರ ಧರ್ಮದೇಟು

ಚಿಕ್ಕಮಗಳೂರು ಜುಲೈ 2: ಸಿರಿಮನೆ ಪಾಲ್ಸ್ ನೋಡಲು ಬಂದಿದ್ದ ಯುವತಿಯೊಬ್ಬಳಿಗೆ ಕಿಟಲೆ ಮಾಡಿದ ಯುವಕರಿಗೆ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ನಡೆದಿದೆ.

ಕಿಟಲೆ ನೀಡಿದ ಯುವಕರು ಮಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ಬಂದ ತಾಯಿ- ಮಗಳು ಫಾಲ್ಸ್ ನೋಡಲು ಸಿರಿಮನೆಗೆ ತೆರಳಿದ್ದರು.

ಈ ಸಂದರ್ಭ ಅಲ್ಲಿದ್ದ ಫಾಲ್ಸ್ ನೋಡಲು ಬಂದಿದ್ದ ಮಂಗಳೂರು ಮೂಲದ ಯುವಕರು ಅಸಭ್ಯವಾಗಿ ವರ್ತಿಸಿ ಹುಡುಗಿಗೆ ಕಿಟಲೆ ಮಾಡಿದ್ದಾರೆ. ಅದೂ ಅಲ್ಲದೇ ಹುಡುಗಿಯ ಮೈ ಮೇಲೆ ಕೈ ಮಾಡಿ ಶಾಲು ಎಳೆದು ಯುವತಿಯ ತಬ್ಬಿಕೊಳ್ಳಲು ಮುಂದಾಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂದರ್ಭದಲ್ಲಿ ಸಹಾಯಕ್ಕಾಗಿ ತಾಯಿ- ಮಗಳು ಕೂಗಿಕೊಂಡಿದ್ದು, ಪರಿಸರದಲ್ಲಿದ್ದ ಸ್ಥಳೀಯರು ರಕ್ಷಣೆಗೆ ಧಾವಿಸಿ ಯುವತಿ ಮತ್ತು ತಾಯಿಯನ್ನು ರಕ್ಷಣೆ ಮಾಡಿ ಯುವಕರಿಗೆ ಧರ್ಮದೇಟು ನೀಡಿ ವಿಚಾರಿಸಿದ್ದಾರೆ. ಯುವಕರಿಗೆ ಧರ್ಮದೇಟು ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VIDEO

Facebook Comments

comments