Connect with us

    LATEST NEWS

    ಕೇಂದ್ರ ಪುರಾತತ್ವ ಇಲಾಖೆ ಸುಪದ್ರಿಯಲ್ಲಿರುವ ಮೂಡಬಿದಿರೆ ಸಾವಿರ ಕಂಬದ ಬಸದಿಯಲ್ಲಿ ಕಳ್ಳತನ

    ಕೇಂದ್ರ ಪುರಾತತ್ವ ಇಲಾಖೆ ಸುಪದ್ರಿಯಲ್ಲಿರುವ ಮೂಡಬಿದಿರೆ ಸಾವಿರ ಕಂಬದ ಬಸದಿಯಲ್ಲಿ ಕಳ್ಳತನ

    ಮೂಡಬಿದಿರೆ ಜುಲೈ 2: ಇತಿಹಾಸ ಪ್ರಸಿದ್ದ ಮೂಡಬಿದಿರೆಯ ಸಾವಿರ ಕಂಬ ಬಸದಿಯಲ್ಲಿ ಮತ್ತೆ ಕಳ್ಳರು ಕೈಚಳಕ ತೋರಿಸಿದ್ದಾರೆ.
    ಜೈನ ಕಾಶಿ ಮೂಡಬಿದಿರೆಯಲ್ಲಿರುವ ಇತಿಹಾಸ ಪ್ರಸಿದ್ದ ಸಾವಿರ ಕಂಬದ ಬಸದಿಯಲ್ಲಿ ನಿನ್ನೆ ರಾತ್ರಿ ಕಳ್ಳರು ಬಸದಿಯ ಮುಂಬಾಗಿಲ ಬೀಗ ಒಡೆದು ಒಳ ಪ್ರವೇಶಿಸಿ ಬಸದಿಯಲ್ಲಿದ್ದ ಕಾಣಿಕೆ ಡಬ್ಬಿಯನ್ನು ಕಳ್ಳತನ ಮಾಡಿದ್ದಾರೆ.

    ಇಂದು ಬೆಳಿಗ್ಗೆ ಈ ವಿಷಯ ಬೆಳಕಿಗೆ ಬಂದಿದ್ದು, ಕೂಡಲೇ ಸ್ಥಳೀಯರು ಪೊಲೀಸರು , ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದಂ ಮಂಗಳೂರಿನಿಂದ ಹಿರಿಯ ಅಧಿಕಾರಿಗಳ ತಂಡವು ಬಸದಿಗೆ ಬೇಟಿ ನೀಡಿ, ಕಳ್ಳರ ಪತ್ತೆಗೆ ಮಾರ್ಗದರ್ಶನ ನೀಡಿದ್ದಾರೆ.

    ಮೂಡಬಿದ್ರೆ ಶ್ರೀಗಳು ಪ್ರವಚನಕ್ಕೆಂದು ವಿದೇಶಿ ಪ್ರವಾಸಕ್ಕೆ ತೆರಳಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರ ದುಷ್ಕರ್ಮಿಗಳ ಪತ್ತೆಗೆ ಆಗ್ರಹಿಸಿದ್ದಾರೆ. ಈ ಹಿಂದೆಯೂ ಈ ಬಸದಿಯಲ್ಲಿ ಕಳ್ಳತನ ನಡೆದಿದ್ದು ಅಮೂಲ್ಯ ವಿಗ್ರಹಗಳನ್ನು ಕಳ್ಳರು ಹೊತ್ತೊಯ್ದಿದ್ದರು. ಕರ್ನಾಟಕದ ಜೈನರ ಪುಣ್ಯಕ್ಷೇತ್ರಗಳಲ್ಲಿ ಅತ್ಯಂತ ಪ್ರಮುಖವಾದ ಬಸದಿ ಇದಾಗಿದ್ದು 1430 ರಲ್ಲಿ ಇದರ ನಿರ್ಮಾಣವಾಗಿದ್ದು, ಕೇಂದ್ರ ಪ್ರಾಚ್ಯ ಮತ್ತು ಪುರಾತತ್ವ ಇಲಾಖೆ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಇದೀಗ ಈ ಘಟನಾವಳಿಗಳಿಂದ ಬಸದಿಯ ಮತ್ತು ಅದರಲ್ಲಿರುವ ಅಮೂಲ್ಯ ಸೊತ್ತುಗಳ ರಕ್ಷಣೆ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ.

    Share Information
    Advertisement
    Click to comment

    You must be logged in to post a comment Login

    Leave a Reply