BELTHANGADI
ಸೌತಡ್ಕ ಮನೆ ದರೋಡೆ ಪ್ರಕರಣ: 9 ಮಂದಿ ಆರೋಪಿಗಳು ಪೊಲೀಸ್ ವಶಕ್ಕೆ
ಸೌತಡ್ಕ, ಎಪ್ರಿಲ್ 03: ವಿಶ್ವ ಹಿಂದೂ ಪರಿಷತ್‌ನ ವಲಯ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಕೊಕ್ಕಡ ಸೌತಡ್ಕ ಸಮೀಪದ ಕೌಕ್ರಾಡಿ ಗ್ರಾಮದ ನೂಜೆ ನಿವಾಸಿ ತುಕ್ರಪ್ಪ ಶೆಟ್ಟಿಯವರ ಮನೆ ದರೋಡೆ ಇತ್ತೀಚೆಗೆ ನಡೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಬ್ದುಲ್ ರವೂಫ್ (24), ರಾಮ ಮೂರ್ತಿ (23) ಅಶ್ರಫ್ ಪೆರಾಡಿ(27), ಸಂತೋಷ್(24), ನವೀದ್(36), ರಮಾನಂದ ಎನ್ ಶೆಟ್ಟಿ(48),ಸುಮನ್(24) , ಸಿದ್ಧಿಕ್(27), ಅಲಿಕೋಯಾ ಇವರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿರುವ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಆರೋಪಿಗಳ ತಂಡವು ಬೆಂಗಳೂರು ವಿಜಯನಗರದಲ್ಲಿ ಮನೆಕಳ್ಳತನಕ್ಕೆ ಯತ್ನ, ಅರೆಹಳ್ಳಿ ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿ, ಪುಂಜಾಲಕಟ್ಟೆಯಲ್ಲಿ ಮನೆಕಳ್ಳತನ, ಮೂಡಬಿದಿರೆ, ಬಜಪೆ, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಣಿ ದರೋಡೆಯಲ್ಲಿ ಭಾಗಿಯಾಗಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.
ಈ ಬಗ್ಗೆ ಆರೋಪಿಗಳ ವಿಚಾರಣೆಯ ಬಳಿಕ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಇಂತಹ ಕೃತ್ಯದಲ್ಲಿ ಶಾಮೀಲಾಗಿರುವ ಹಾಗೂ ಕೃತ್ಯಕ್ಕೆ ಸಹಕಾರ ನೀಡಿದ ಇನ್ನಿತರ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
You must be logged in to post a comment Login