Connect with us

LATEST NEWS

ಶಿರ್ವ – ತಾಯಿ ಜೊತೆ ಬಟ್ಟೆ ಖರೀದಿಗೆ ಬಂದಿದ್ದ ಎರಡೂವರೆ ವರ್ಷದ ಮಗು ಬಾವಿಯಲ್ಲಿ ಶವವಾಗಿ ಪತ್ತೆ

ಉಡುಪಿ ಎಪ್ರಿಲ್ 3: ಬಟ್ಟೆ ಖರೀದಿಗೆ ತಾಯಿ ಜೊತೆ ಬಂದಿದ್ದ ಎರಡೂವರೆ ವರ್ಷದ ಮಗುವೊಂದು ಬಟ್ಟೆ ಅಂಗಡಿ ಹಿಂಬದಿಯ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದೆ. ಮೃತ ಬಾಲಕಿಯನ್ನು ಅದಮಾರಿನ ಜಯಲಕ್ಷ್ಮಿ ಮತ್ತು ಕೃಷ್ಣ ದಂಪತಿಗಳ ಪುತ್ರಿ ಪ್ರಿಯಾಂಕಾ ಎಂದು ಗುರುತಿಸಲಾಗಿದೆ.


ಶನಿವಾರ ಕುಟುಂಬವು ಬಟ್ಟೆ ಖರೀದಿಗೋಸ್ಕರ ಅದಮಾರಿನಿಂದ ಮದರಂಗಡಿಗೆ ಬಂದಿದ್ದರು. ಪೋಷಕರು ಬಟ್ಟೆ ಖರೀದಿಸುವ ಸಂದರ್ಭ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದ ಹಾಗೆ ಕಾಣೆಯಾಗಿತ್ತು. ಪೋಷಕರು ಮಗುವನ್ನು ಹುಡುಕಾಡಿದರೂ ಸಿಗದ ಕಾರಣ ಶಿರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಈ ನಡುವೆ ಮಗು ಕಾಣೆಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗಿತ್ತು.

ಮಗುವನ್ನು ಹುಡುಕಾಟ ಆರಂಭಿಸಿದ ಪೊಲೀಸರು ಹಾಗೂ ಸ್ಥಳೀಯರಿಗೆ ಅಂಗಡಿಯ ಹಿಂದಿನ ಬಾವಿ ಬಳಿ ಚೀಲ ಮತ್ತು ಹೂವನ್ನು ನೋಡಿದರು. ಈ ಸಂದರ್ಭ ಬಾವಿಯಲ್ಲಿ ಮಗು ಬಿದ್ದಿರುವುದು ಕಂಡು ಬಂದಿದೆ. ಈ ಬಗ್ಗೆ ಶಿರ್ವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಗು ಅಂಗಡಿಯ ಹೊರಗೆ ಆಟವಾಡುತ್ತಾ ಅಂಗಡಿ ಹಿಂದೆ ಹೋಗಿ ಕಡಿಮೆ ಎತ್ತರ ವಿರುವ ಬಾವಿ ಆವರಣದಲ್ಲಿ ಆಯತಪ್ಪಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.