Connect with us

    LATEST NEWS

    ಕುಟುಂಬದೊಂದಿಗೆ ಬಂದು ಮತದಾನ ಮಾಡಿದ ವಿನಯ್ ಕುಮಾರ್ ಸೊರಕೆ

    ಕಾಪು: ಕಾಪು‌ ಕ್ಷೇತ್ರದ‌ ಕಾಂಗ್ರೆಸ್ ಅಭ್ಯರ್ಥಿ ಕುಟುಂಬದೊಂದಿಗೆ ಅಜ್ಜರಕಾಡು ಮತಗಟ್ಟೆಗೆ ಬಂದು ಮತದಾನ ಮಾಡಿದರು.


    ಪತ್ನಿ ದಕ್ಷ ಸೊರಕೆ ಮತ್ತು ಮಗ ದ್ವಿಶನ್ ಸೊರಕೆ ಜೊತೆ ಮನೆಯಿಂದ ಮತಗಟ್ಟೆವರೆಗೆ ನಡೆದುಕೊಂಡು ಬಂದು ಸರತಿ ಸಾಲಿನಲ್ಲಿ‌‌ ನಿಂತು ಮತದಾನ ಮಾಡಿದರು.


    ಈ ಸಂದರ್ಭ ಮಾತನಾಡಿದ ವಿನಯ್ ಕುಮಾರ್ ಸೊರಕೆ ನಾನು ಕಾಪು ಕ್ಷೇತ್ರಕ್ಕೆ ಮಾಡಿದ ಪ್ರಾಮಾಣಿಕ ಸೇವೆ ಅಭಿವೃದ್ಧಿ ಗಳು ನನ್ನ‌ ಕೈ ಹಿಡಿಯಲಿದೆ.ಕಾಪು ಕ್ಷೇತ್ರದಲ್ಲಿ ಪ್ರಜ್ನಾವಂತ ಮತದಾರರಿದ್ದು ಈ ಬಾರಿ ಜನತೆ ನನ್ನನ್ನು ಆಯ್ಕೆ ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಅಂತಾ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply