Connect with us

    KARNATAKA

    ಒಂದೇ ಕುಟುಂಬದ 65 ಮಂದಿಯಿಂದ ಏಕಕಾಲಕ್ಕೆ ಮತದಾನ!

    ಚಿಕ್ಕಬಳ್ಳಾಪುರ, ಮೇ 10: ರಾಜ್ಯದಲ್ಲಿ ಇಂದು ವಿಧಾನಸಭೆಗೆ ಚುನಾವಣೆ ಭರದಿಂದ ಸಾಗುತ್ತಿದ್ದು, ಬೆಳ್ಳಂಬೆಳಗ್ಗೆಯೇ ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65 ಮಂದಿ ಏಕಕಾಲಕ್ಕೆ ಮತದಾನ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಬಾದಂ ಕುಟುಂಬದವರಿಂದ ಮತದಾನ ನಡೆದಿದೆ. ಒಂದೇ ಕುಟುಂಬದ 65 ಮಂದಿಯೂ ಏಕಕಾಲಕ್ಕೆ ಜ್ಯೂನಿಯರ್ ಕಾಲೇಜು ಆವರಣಕ್ಕೆ ಬಂದು ಮತ ಚಲಾಯಿಸಿದ್ದಾರೆ.

    ಬಾದಾಮ್ ಕುಟುಂಬದ ಸದಸ್ಯರೆಲ್ಲರೂ ಒಂದೇ ಬಾರೀ ಎಲ್ಲರೂ ಆಗಮಿಸಿ ಮತ ಚಲಾಯಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಬಾದಂ ಕುಟುಂಬಸ್ಥರು, ಪ್ರತಿ ಬಾರಿಯೂ ಕುಟುಂಬಸ್ಥರೆಲ್ಲರೂ ಒಮ್ಮೆಲೆ ಆಗಮಿಸಿ ಮತ ಚಲಾವಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply