FILM
ಇಲ್ಲಿ ಯಾರೂ ಸಾಚಾ ಅಲ್ಲ…ಆದರೆ ನನ್ನ ವಿಡಿಯೋ ಹೊರಗೆ ಬಂತು – ಸೋನು ಶ್ರೀನಿವಾಸ್ ಗೌಡ
ಬೆಂಗಳೂರು ಅಗಸ್ಟ್ 08: ಸಾಮಾಜಿಕ ಜಾಲಾತಣದಲ್ಲಿ ಪರಿಚಿತವಾಗಿರುವ ಮುಖ ಸೋನು ಶ್ರೀನಿವಾಸ ಗೌಡ ಇದೀಗ ಬಿಗ್ ಬಾಸ್ ಓಟಿಟಿಯಲ್ಲಿ ತನ್ನ ಖಾಸಗಿ ವಿಡಿಯೋ ವೈರಲ್ ಆದ ಬಗ್ಗೆ ವಿವರಣೆ ನೀಡಿದ್ದಾರೆ. ಬಾಯ್ ಫ್ರೆಂಡ್ ನಂಬಿ ತಾನು ಮೋಸ ಹೋದ ಬಗ್ಗೆ ಕಣ್ಣೀರಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರಿಲ್ಸ್ ಮೂಲಕ ಖ್ಯಾತಿ ಹೊಂದಿರುವ ಸೋನು ಶ್ರೀನಿವಾಸ ಗೌಡ ಇದೀಗ ಕಲರ್ಸ್ ಕನ್ನಡದ ಬಿಗ್ ಬಾಸ್ ಓಟಿಟಿ ಸರಣಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ನಡುವೆ ಇವರು ಬಿಗ್ ಬಾಸ್ ಎಂಟ್ರಿ ಬಗ್ಗೆ ಭಾರೀ ಅಪಸ್ವರ ಕೇಳಿ ಬಂದಿತ್ತು. ಇದೀಗ ತಮ್ಮ ಖಾಸಗಿ ವಿಡಿಯೋ ಲೀಕ್ ಆದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸೋನು ಶ್ರೀನಿವಾಸ ಗೌಡ ಅವರೇ ತಿಳಿಸಿದ್ದಾರೆ.
ಅವನು ಮೊದಲಿನಿಂದ ನನಗೆ ಗೊತ್ತಿದ್ದ ಹುಡುಗ. ನಮ್ಮ ಜಾತಿಯವನು. ಅವರನ್ನು ಮದುವೆ ಆಗ್ತೀನಿ ಅಂತ ಮನೆಯಲ್ಲಿ ಹೇಳಿದ್ದೆ. ಒಂದು ದಿನ ವಿಡಿಯೋ ಕಾಲ್ ಮಾಡು ಅಂದ. ಹೇಗೂ ಮದುವೆ ಆಗುತ್ತೇವಲ್ಲ ಅಂತ ನಾನು ವಿಡಿಯೋ ಕಾಲ್ನಲ್ಲಿ ಹಾಗೆ ಮಾಡಿದೆ. ಅದನ್ನು ಅವನು ರೆಕಾರ್ಡ್ ಮಾಡಿಕೊಂಡ. ಒಂದು ವಾರದ ನಂತರ ಅವನು ರೂಡ್ ಆಗಿ ನಡೆದುಕೊಳ್ಳಲು ಶುರು ಮಾಡಿದ’ ಎಂದು ಆತನ ಬಗ್ಗೆ ಸೂನು ಗೌಡ ವಿವರಿಸಿದ್ದಾರೆ.
ಆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ. ಆಗಲೇ ನಾನು ಅಮ್ಮನ ಬಳಿಕ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದೆ. ಒಂದೂವರೆ ವರ್ಷದ ಬಳಿಕ ಮೆಸೇಜ್ ಮಾಡಿ ಹೆದರಿಸಿದ. ವಿಡಿಯೋ ಲೀಕ್ ಮಾಡ್ತೀನಿ ಅಂತ ಬೆದರಿಸಿದ. ಅಳುತ್ತಾ ನಾನು ಡಿಪ್ರೆಷನ್ಗೆ ಹೋದೆ. ಆ ವಿಡಿಯೋ ಲೀಕ್ ಆದ ಬಳಿಕ ನಾನು ನಮ್ಮ ಊರಿಗೆ ಹೋಗಿಲ್ಲ’ ಎಂದು ಸೋನು ಗೌಡ ಕಣ್ಣೀರು ಹಾಕಿದ್ದಾರೆ.