Connect with us

LATEST NEWS

ಫ್ಲೈಓವರ್​ನಿಂದ ಹಳ್ಳಕ್ಕೆ ಬಿದ್ದ ಕಾರು; ಮೂವರ ಸ್ಥಿತಿ ಚಿಂತಾಜನಕ, ನಾಲ್ವರಿಗೆ ಗಾಯ.

ತಮಿಳುನಾಡು, ಆಗಸ್ಟ್ 08: ಕಾರೊಂದು ಫ್ಲೈಓವರ್​ನಿಂದ ಕೆಳಗಿನ ಹಳ್ಳಕ್ಕೆ ಬಿದ್ದಿದ್ದು, ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ. ಜತೆಗೆ ನಾಲ್ವರಿಗೆ ಗಂಭೀರವಾದ ಗಾಯಗಳಾಗಿವೆ. ತಮಿಳುನಾಡಿನ ಸೂಲಗಿರಿ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.

ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರು ಬೆಂಗಳೂರಿನಿಂದ ಚೆನ್ನೈ ಕಡೆಗೆ ಹೋಗುತ್ತಿತ್ತು. ಈ ಕಾರಿನಲ್ಲಿ ಏಳು ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಸೂಲಗಿರಿ ಸಮೀಪಿ ಕಾರು ಅಪಘಾತಕ್ಕೀಡಾಗಿತ್ತು.

ಸೂಲಗಿರಿ ಸಮೀಪ ಕಾರಿಗೆ ತಮಿಳುನಾಡು ಸರ್ಕಾರಿ ಬಸ್ ಡಿಕ್ಕಿ ಹೊಡೆದಿತ್ತು. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಫ್ಲೈಓವರ್​ನಿಂದ ಕೆಳಗಿನ ಹಳ್ಳವೊಂದಕ್ಕೆ ಬಿದ್ದಿದೆ. ಗಾಯಾಳುಗಳನ್ನು ಬೆಂಗಳೂರು ಹೊರವಲಯದ ಚಂದಾಪುರದ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Advertisement
Click to comment

You must be logged in to post a comment Login

Leave a Reply