DAKSHINA KANNADA
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಸುಳ್ಯ ಪಿಎಫ್ಐ ಕಚೇರಿಯಲ್ಲಿ ಪೋಲಿಸರಿಂದ ಮಹಜರು
ಸುಳ್ಯ, ಆಗಸ್ಟ್ 08: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪಿಎಫ್ಐ ಕಚೇರಿಯಲ್ಲಿ ಮಹಜರು ನಡೆಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಗಾಂಧಿನಗರದ ಅಲೆಟ್ಟಿ ರಸ್ತೆಯಲ್ಲಿರೋ ಪಿಎಫ್ಐ ಕಚೇರಿಯಲ್ಲಿ ಪೋಲಿಸರು ಮಹಜರು ನಡೆಸಿದ್ದಾರೆ. ನಿನ್ನೆ ಬಂಧಿತರಾದ ಅಬೀದ್ ಮತ್ತು ನೌಫಾಲ್ ಕರೆದುಕೊಂಡು ಸುಳ್ಯ ಪೊಲೀಸರ ತಂಡ ಮಹಜರು ನಡೆಸಿದೆ.
ಆರೋಪಿಗಳಿಬ್ಬರನ್ನು ಕರೆದುಕೊಂಡು ಹೋಗಿ ಸ್ಪಾಟ್ ಮಹಜರು ಮಾಡಿದ್ದು, ಪ್ರವೀಣ್ ಹತ್ಯೆಗೆ ಇದೇ ಕಛೇರಿಯಲ್ಲಿ ಸಂಚನ್ನು ಮಾಡಲಾಗಿದೆ ಎನ್ನವ ಮಾಹಿತಿ ಇದೆ, ಈ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ಎಡಿಜಿಪಿ ಅಲೋಕ್ ಕುಮಾರ್ ಪಡೆಯುತ್ತಿದ್ದಾರೆ .
You must be logged in to post a comment Login