DAKSHINA KANNADA
ಉಗ್ರರ ಹೆಡೆಮುರಿ ಕಟ್ಟಿದ ಯೋಧ – ಕರಾವಳಿಯ ಹೆಮ್ಮೆಯ ಪುತ್ರ
ಉಗ್ರರ ಹೆಡೆಮುರಿ ಕಟ್ಟಿದ ಯೋಧ – ಕರಾವಳಿಯ ಹೆಮ್ಮೆಯ ಪುತ್ರ
ಮಂಗಳೂರು ಫೆಬ್ರವರಿ 16 : ಕಾಶ್ಮೀರ ಕಣಿವೆಯಲ್ಲಿ ಕಳೆದ ಮೂರು, ನಾಲ್ಕು ದಿನಗಳಿಂದ ಒಳ ನುಸುಳಿದ್ದ ಲಷ್ಕರ್-ಎ-ತೋಯ್ಬಾದ ಭಯೋತ್ಪಾದಕರನ್ನು ಸಿಆರ್ ಪಿಎಫ್ ಯೋಧರು ಹೊಡೆದುರುಳಿಸಿದ್ದರು. ಕರಣ್ ನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಆರ್ ಪಿಎಫ್ ಯೋಧರ ತಂಡದಲ್ಲಿ ಕರ್ನಾಟಕದ ಕರಾವಳಿ ವೀರಯೋಧನೂ ಇದ್ದು ಉಗ್ರರೊಡನೆ ಹೋರಾಡಿದ ಅವರು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ನೇರಂಕಿ ಗ್ರಾಮದ ಜುಬೇರ್ ಕರಣ್ ನಗರದಲ್ಲಿ ನಡೆದ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಲಷ್ಕರ್-ಎ-ತೋಯ್ಬಾದ ಉಗ್ರರು ಕಾಶ್ಮೀರದ ಕಟ್ಟಡವೊಂದರಲ್ಲಿ ಅವಿತು ಕುಳಿತು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಕಟ್ಟಡದಲ್ಲಿ ಅಡಗಿ ಕುಳಿತಿದ್ದ ಕೆಲವೇ ಗಂಟೆಗಳಲ್ಲಿ ಉಗ್ರರನ್ನು ಹೊಡೆದುರುಳಿಸೋದರಲ್ಲಿ ಸಫಲರಾಗಿದ್ದರು.
ಚಿಕ್ಕಂದಿನಿಂದಲೇ ಸೈನ್ಯ ಸೇರುವ ಬಯಕೆ ಹೊಂದಿದ್ದ ಜುಬೇರ್ ಕಾರ್ಯಕ್ಕೆ ಕರಾವಳಿಯಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಇದೀಗ ದೇಶಕ್ಕೆ ಹೆಮ್ಮೆ ತಂದ ನಮ್ಮ ಕನ್ನಡ ನಾಡಿನ ಯೋಧನಿಗೆ ಒಂದು ಸಲಾಂ.
You must be logged in to post a comment Login