LATEST NEWS
ಮಂಗಳೂರಿನಲ್ಲಿ ಈ ವರ್ಷದ ಕೊನೆಯ ಸೂರ್ಯಗ್ರಹಣ ಕಣ್ತುಂಬಿಕೊಂಡ ಜನರು
ಮಂಗಳೂರಿನಲ್ಲಿ ಈ ವರ್ಷದ ಕೊನೆಯ ಸೂರ್ಯಗ್ರಹಣ ಕಣ್ತುಂಬಿಕೊಂಡ ಜನರು
ಮಂಗಳೂರು ಡಿಸೆಂಬರ್ 26: ಈ ವರ್ಷದ ಕೊನೆಯ ಸೂರ್ಯಗ್ರಹಣ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಬಹುತೇಕ ದಕ್ಷಿಣಭಾರತದ ಕೇರಳದ ಕಣ್ಣೂರು, ಕೊಚ್ಚಿ, ಕೋಳಿಕ್ಕೋಡ್, ತ್ರಿವೆಂಡ್ರಮ್ ಹಾಗೂ ತಮಿಳುನಾಡಿನ ಕೊಯಮತ್ತೂರು, ಮದುರೈ, ಊಟಿ, ತಿರುಚಿ, ಚೆನ್ನೈ ಮತ್ತು ಕರ್ನಾಟಕದ ಮಂಗಳೂರು ಬೆಂಗಳೂರು ಸೇರಿದಂತೆ ಹಲವೆಡೆ ಗ್ರಹಣ ಸಂಪೂರ್ಣ ಗೋಚರವಾಗಿದೆ.
ವಿಶೇಷವಾಗಿ ಸೂರ್ಯನ ಮೇಲೆ ಬೆಳಗ್ಗೆ 10:47ಕ್ಕೆ ಚಂದ್ರನು ಸಂಪೂರ್ಣ ಎದುರಾಗಲಿದ್ದಾನೆ. 4 ನಿಮಿಷಕ್ಕಿಂತಲೂ ಕಡಿಮೆ ಅವಧಿಯವರೆಗೂ ಚಂದ್ರ ಸಂಪೂರ್ಣ ಸೂರ್ಯನ ಎದುರಾಗಿರುತ್ತಾನೆ. ಇದು ಸೂರ್ಯಗ್ರಹಣದ ಬಹುಮುಖ್ಯ ಕ್ಷಣವೆಂದು ಕರೆಯಲಾಗಿದೆ. ದ್ಯ ಗೋಚರಿಸುತ್ತಿರುವ ಸೂರ್ಯಗ್ರಹಣವು ಈ ವರ್ಷದ ಮೂರನೇ ಸೂರ್ಯ ಗ್ರಹಣವಾಗಿದೆ.
ಈ ಬಾರಿಯ ಸೂರ್ಯಗ್ರಹಣ ಮೂರು ಲಗ್ನಗಳಲ್ಲಿ ಬರೋದರಿಂದ ಇದನ್ನು ರಕ್ತ ಗ್ರಹಣ ಮತ್ತು ಕೇತುಗ್ರಸ್ಥ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ. ಈ ಕಂಕಣ ಸೂರ್ಯಗ್ರಹಣದ ಪ್ರಯುಕ್ತ ಇಂದು ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ದೇವಾಲಯದ ಬಾಗಿಲು ಮುಚ್ಚಲಾಗಿದ್ದು , ದೇವರ ದರ್ಶನ ಸ್ಥಗಿತ ಮಾಡಲಾಗಿದೆ.