Connect with us

    LATEST NEWS

    ಅರುಣ್ ಕುಮಾರ್ ಪುತ್ತಿಲರ ಇನ್ನೊಂದು ಮುಖ ಸಮಾಜಕ್ಕೆ ತಿಳಿಯಬೇಕಿದೆ: ರಮೇಶ್ ಬೈಪಡಿತ್ತಾಯ

    ಪುತ್ತೂರು, ಮೇ 04: ಹಿಂದುತ್ವದ ಹೆಸರಿನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರ ಇನ್ನೊಂದು ಮುಖ ಸಮಾಜಕ್ಕೆ ತಿಳಿಯಬೇಕಿದೆ ಎಂದು ಪುತ್ತೂರಿನ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರಮೇಶ್ ಬೈಪಡಿತ್ತಾಯ ಹೇಳಿದರು.

    ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದುಗಳಿಗೆ, ಹಿಂದೂ ದೇವಸ್ಥಾನಕ್ಕೆ ನಿರಂತರವಾಗಿ ಅನ್ಯಾಯ ಎಸಗಿರುವ ಅರುಣ್ ಪುತ್ತಿಲರನ್ನು ಹಿಂದೂ ಮುಖಂಡ ಎಂದು ಗುರುತಿಸಲಾಗುತ್ತಿದೆ.

    ದೇವಸ್ಥಾನದ ಅರ್ಚಕನಾದ ನನ್ನನ್ನು ದೇವರ ನಡೆಯಲ್ಲೇ ಭಕ್ತರ ಎದುರು ಹೀನಾಯವಾಗಿ ಬೈದಿರುವ, ಒಂಟಿ ಮಹಿಳೆ ಮನೆಯಲ್ಲಿರುವಾಗ ತನ್ನ ಪುಂಡರ ಗುಂಪಿನೊಂದಿಗೆ ಮನೆಗೆ ನುಗ್ಗಿ ಆವರಣ ಗೋಡೆಯನ್ನೆಲ್ಲಾ ಬಲವಂತವಾಗಿ ದ್ವಂಸ ಮಾಡುವ ವ್ಯಕ್ತಿ ಹಿಂದೂ ಮುಖಂಡನಾಗಲು‌ ಹೇಗೆ ಸಾಧ್ಯ ಎಂದ ಅವರು ಆತನ ವಿರುದ್ಧ ಮಾತೆತ್ತಿದರೆ ಬೆದರಿಕೆ ಹಾಕುವ, ಹಿಂದೂಗಳಿಗೆ, ಹಿರಿಯರಿಗೆ ಗೌರವ ಕೊಡದ ಈತನನ್ನು ಹಿಂದೂ ಮುಖ‌ಂಡ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು,

    ಆತ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಯರಾಗಿದ್ದ ಈ ವ್ಯಕ್ತಿ ದೇವರಿಗೆ ಕೊಡುವ ನೈವೇದ್ಯ ತಯಾರಿಸುವ ಅಕ್ಕಿಯನ್ನೂ ಕೊಡದೆ, ಹಲವು ಸಮಯ ದೇವರಿಗ ನೈವೇದ್ಯವನ್ನೇ ಇಲ್ಲದಂತೆ ಮಾಡಿದ ವ್ಯಕ್ತಿ. ಹಿಂದೂ ದೇವಸ್ಥಾನಗಳಿಗೆ, ಹಿಂದೂಗಳಿಗೆ ಅನ್ಯಾಯ ಮಾಡುವ ವ್ಯಕ್ತಿ ಇದೀಗ ಚುನಾವಣೆಗೆ ನಿಂತಿದ್ದು, ಈತನಿಗೆ ಯಾರೂ ಬೆಂಬಲ ಕೊಡಬಾರದು ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply