KARNATAKA
ರೌಡಿಗಳ ಕಾಂಟ್ಯಾಕ್ಟ್ ಬೇಕಾದರೆ ಕೇಳು ಎಂದ ಯೂಟ್ಯೂಬರ್ ನ್ನ ಠಾಣೆಗೆ ಕರೆಸಿ ನಂಬರ್ ಕೊಡು ಎಂದ ಪೊಲೀಸರು…!!
ಬೆಂಗಳೂರು ಸೆಪ್ಟೆಂಬರ್ 09: ಕಂಟೆಂಟ್ ಮಾಡಿಕೊಂಡು ಇರಬೇಕಾದ ಯುಟ್ಯೂರ್ ಗಳು ಇದೀಗ ರೌಡಿಸಂ ಮಾಡುವ ಹಂತಕ್ಕೆ ಹೋಗಿದ್ದು, ಬೆದರಿಕೆ ಹಾಕುವ ವಿಡಿಯೋ ಮಾಡುವ ಸಂದರ್ಭ ನನಗೆ ರೌಡಿಗಳು ಗೊತ್ತು ಎಂದು ಬೆದರಿಕೆ ಮಾಡಿದ ಕನ್ನಡ ಯೂಟ್ಯೂಬರ್ ದೀಪಕ್ (@DVINKANNADA)ರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಹ ಯೂಟ್ಯೂಬರ್ ಗೆ ದೀಪಕ್ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನಲಾಗಿದೆ. ಈ ಕುರಿತಂತೆ ದೀಪಕ್ ಸ್ವತಃ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಇದೇ ವಿಚಾರವಾಗಿ ಬೆಂಗಳೂರಿನ ಕಾಡುಗೋಡಿ ಪೊಲೀಸರು ಯೂಟ್ಯೂಬರ್ ದೀಪಕ್ ರನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲದೆ ಈ ಕುರಿತು ಎಕ್ಸ್ ನಲ್ಲಿ ಸ್ಪಷ್ಟನೆ ಕೂಡ ನೀಡಿರುವ ಪೊಲೀಸರು (@dcpwhitefield) ‘ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಾಕಿ ಸಾರ್ವಜನಿಕರಲ್ಲಿ ಸುರಕ್ಷತಾ ಭಯವನ್ನು ಉಂಟುಮಾಡಿರುವ ದೀಪಕ್ ಎಂಬ ವ್ಯಕ್ತಿಯನ್ನು ಪತ್ತೆ ಮಾಡಿ, ವಶಕ್ಕೆ ಪಡೆದು, ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿರುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.
Spreading hate online? We are here to remind you that our city thrives on kindness, not cruelty. Speak up for respect or face the consequences! #WeServeWeProtect pic.twitter.com/6DWS1LXGWb
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) September 9, 2024
You must be logged in to post a comment Login