Connect with us

    LATEST NEWS

    ಉಳ್ಳಾಲದಲ್ಲಿ ಶೀಘ್ರ ಡಯಾಲಿಸಿಸ್ ಕೇಂದ್ರ ಆರಂಭ, ಅರ್ಜಿ ಸಲ್ಲಿಸಲು ರೋಗಿಗಳಿಗೆ ಸೂಚನೆ

    ಮಂಗಳೂರು :   ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲದಲ್ಲಿ ಶೀಘ್ರದಲ್ಲಿ ಹೊಸ ಡಯಾಲಿಸಿಸ್ ಚಿಕಿತ್ಸಾ ಕೇಂದ್ರ (dialysis center) ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ವ್ಯಾಪ್ತಿಗೆ ಬರುವ ಡಯಾಲಿಸಿಸ್ ರೋಗಿಗಳು ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ ಇಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

    5 ಕಿ. ಮೀ ವ್ಯಾಪ್ತಿಯಲ್ಲಿನ ಡಯಾಲಿಸಿಸ್ ರೋಗಿಗಳು (ಸ್ಥಳೀಯ), ಹಿರಿಯ ನಾಗರಿಕರು, ಮಹಿಳೆಯರು, ಕಡುಬಡವರು, ವಿಕಲಚೇತನರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದವರಿಗೆ ಆದ್ಯತೆ ಮೇರೆಗೆ ಡಯಾಲಿಸಿಸ್ ರೋಗಿಗಳನ್ನು ಪರಿಗಣಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಆಡಳಿತ ವೈದ್ಯಾಧಿಕಾರಿ ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ ಇಲ್ಲಿಗೆ ಬೆಳಿಗ್ಗೆ 9 ರಿಂದ ಯಿಂದ ಸಂಜೆ 4.30 ರ ಕಚೇರಿ ಅವಧಿಯಲ್ಲಿ ಭೇಟಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply