Connect with us

    LATEST NEWS

    ಜಿಲ್ಲೆಯ ನಾಯಕರಿಗೆ ಸಾಮಾಜಿಕ ಹೋರಾಟಗಾರ ಎಂ.ಜಿ. ಹೆಗಡೆಯ ಬಹಿರಂಗ ಪತ್ರ.

     ಜಿಲ್ಲೆಯ ನಾಯಕರಿಗೆ ಸಾಮಾಜಿಕ ಹೋರಾಟಗಾರಎಂ.ಜಿ. ಹೆಗಡೆಯ ಬಹಿರಂಗ ಪತ್ರ.

    ಕರಾವಳಿ ಬದುಕಲು ಬಿಡಿ.
    ಮಾನ್ಯ
    ಶ್ರೀ ನಳೀನ್ ಕುಮಾರರೇ
    ಶ್ರೀ ಕಲ್ಲಡ್ಕ ಪ್ರಭಾಕರ ಭಟ್ಟರೇ
    ಶ್ರೀ ಬಿ.ರಮಾನಾಥ ರೈ ಅವರೇ
    ಶ್ರೀ ಯು.ಟಿ.ಖಾದರ್ ಅವರೇ
    ಜಿಲ್ಲೆಯ ಸಮಸ್ಥ ಶಾಸಕರೇ
    ಮಾಜೀ ಶಾಸಕರೇ,
    ವಿಧಾನ ಪರಿಷತ್ ಸದಸ್ಯರೇ
    ಹಿಂದೂ,ಮುಸ್ಲಿಂ ಸಂಘಟನೆಯವರು ಗಳ ನಾಯಕರೇ

    ಕರಾವಳಿಯ ಬದುಕು ಕರಾಳವಾಗುತ್ತಿದೆ. ಅಮಾಯಕರ ಹತ್ಯೆ ನಿರಂತರವಾಗಿದೆ.

    ಪಾಲಕರ ರೋಧನ ಮುಗಿಲು ಮುಟ್ಟಿದೆ.
    ಜನ ಸಾಮಾನ್ಯರ ಬದುಕು ಅಸಹನೀಯವಾಗಿದೆ. ಬದುಕು ದುಸ್ತರವಾಗುತ್ತಿದೆ.

    ಶ್ರೀಮಂತ ಸಾಂಸ್ಕೃತಿಕ ಸಹಬಾಳ್ವೆಯ ಕರಾವಳಿಯ ಹೆಸರು ಹಳ್ಳಹಿಡಿಯುತ್ತಿದೆ. ಭಯಗ್ರಸ್ಥ ಮನಸ್ಥಿಯ ಪ್ರಭಾವಳೀ ಇಡೀ ಕರಾವಳಿಯನ್ನ ಆವರಿಸುತ್ತಿದೆ.

    ಕರಾವಳಿಗೆ ಬದುಕು ಪ್ರಶ್ನಾರ್ಥಕವಾಗಿದೆ

    ತಮ್ಮನ್ನ ಜಿಲ್ಲೆಯ ಜನ ವಿವಿಧ ವೇದಿಕೆಗಳ ನಾಯಕರನ್ನಾಗಿಸಿದೆ. ಗೌರವಿಸಿದೆ.ಪ್ರೀತಿಸಿದೆ. ಉನ್ನತ ಸ್ಥಾನಗಳಲ್ಲಿ ಕುಳ್ಳಿರಿಸಿದೆ.
    ತನ್ನ ಉತ್ತಮ ಕೊಡುಗೆಗಳಿಂದಾಗಿ
    ಇಡೀ ವಿಶ್ವ ಮೆಚ್ಚಿದ ಊರು ನಮ್ಮೂರು.
    ಜಿಲ್ಲೆಯ ಅಭಿವೃಧ್ದಿಯಲ್ಲೂ ನಿಮ್ಮ ಕೊಡುಗೆಗಳೂ ಇದೆ.
    ಪ್ರಸ್ತುತ ಸಮಸ್ಯೆಗೆ ಮತರಾಜಕಾರಣ, ಮತೀಯ ಕಾರಣಗಳ ಕೊಂಡಿ ನಮಗೆ ಬೇಡ. ನಮಗೆ ಶಾಂತ ಜಿಲ್ಲೆಯ ಬದುಕು ಬೇಕು. ಸಮಸ್ಯೆ ಇಲ್ಲವೆಂದಲ್ಲ. ಅದಕ್ಕೆ ಉತ್ತರ ಹುಡುಕಿ ಪರಿಹಾರ ಮಾಡಬೇಕಾದವರು ನೀವು ತಾನೇ?
    ಒಮ್ಮೆ ದಯಮಾಡಿ ಒಮ್ಮೆ ರಾಜಕಾರಣ ಮತೀಯ ವಿಚಾರಗಳ ಆಚೆ ಬನ್ನೀ
    ಒಮ್ಮೆ ನಮ್ಮ ತಾಯ್ನೆಲದ ತುಳುನಾಡ ಉಳಿವಿಗಾಗಿ ಒಂದಾಗಿ. ಎಂತೆತಹ ಸಮಸ್ಯೆ ಬಗೆಹರಿಸಿದ ನಿಮಗೆ ಇದು ಯಾವ ಕಷ್ಟವೂ ಅಲ್ಲ.
    ಒಮ್ಮೆ ನೀವುಗಳು ಒಂದಾಗಿ ಕೂತು ಮಾತನಾಡಿ. ಶಾಶ್ವತ ಪರಿಹಾರಕ್ಕೆ ದಾರಿ ಹುಡುಕಿ. ಸಮಸ್ಯೆ ಜನ ಸಾಮಾನ್ಯರದ್ದಲ್ಲ.
    ರಾಜಕಾರಣ ಮತ್ತು ಮತೀಯ ಕಾರಣಗಳದ್ದು. ಉತ್ತರ ಹುಡುಕುವ ಜವಾಭ್ದಾರಿಯೂ ನಿಮ್ಮದೆ. ಕರಾವಳಿಯ ಮುಂದಿನ ಪೀಳಿಗೆಯ ಕಂಗಳಲ್ಲಿನ ಕನಸುಗಳನ್ನ ನೋಡಿ. ಮುಗ್ಧ ಜನರ ಬದುಕು ಕಟ್ಟುವ ಬಯಕೆಗಳನ್ನ ನೋಡಿ.
    ದಯಮಾಡಿ ಒಮ್ಮೆ ಜಿಲ್ಲೆಯ ಭವಿಷ್ಯಕ್ಕಾಗಿ ಈ ವಿಚಾರದಲ್ಲಿ ಒಂದಾಗಿ ಮಾರ್ಗದರ್ಶನ ನೀಡಿ.

    ನಾನು ಬರೆದ ಪತ್ರದಲ್ಲಿ ನಿಮ್ಮನ್ನು ನೋಯಿಸುವ ಅಕ್ಷರಗಳಿದ್ದರೆ ಕ್ಷಮೆ ಇರಲಿ.
    ಸತ್ತು ಸ್ವರ್ಗ ಸೇರಿದ ಸಹೋದರರ ಧ್ವನಿಯೆಂದೂ,ನನ್ನಂತಹ ಸಾಮಾನ್ಯ ನಾಗರೀಕನ ನರ್ಮ ವಿನಂತಿಯೆಂದು ಪರಿಗಣಿಸಿ.

    ಸೂಚನೆ. ಕೆಟ್ಟ ..ಭಾಷೆ ಮತೀಯ ವೈಯಕ್ತಿಕ ನಿಂದನೆ ಜಗಳ ಮಾಡಬೇಡಿ.
    ನನ್ನ ಪತ್ರದ ಉದ್ದೇಶ ಅರ್ಥವಾದರೆ share ಮಾಡಿ
    ಕರಾವಳಿ ಬದುಕಲು ಬಿಡಿ

    ವಂದನೆಗಳೊಂದಿಗೆ
    ಎಂ.ಜಿ. ಹೆಗಡೆ

    Share Information
    Advertisement
    Click to comment

    You must be logged in to post a comment Login

    Leave a Reply