Connect with us

  LATEST NEWS

  ಮೊಬೈಲ್ ನಲ್ಲಿ ಕಾರ್ಟೂನ್ ನೋಡುತ್ತಿದ್ದ ಪುಟ್ಟ ಬಾಲಕಿ ಹೃದಯಾಘಾತಕ್ಕೆ ಬಲಿ

  ಲಖನೌ ಜನವರಿ 22: ಐದು ವರ್ಷದ ಬಾಲಕಿಯೊಬ್ಬಳು ತನ್ನ ಮೊಬೈಲ್‌ನಲ್ಲಿ ಕಾರ್ಟೂನ್ ನೋಡುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಕೊತ್ವಾಲಿಯ ಹತೈಖೇಡಾದಲ್ಲಿ ಈ ದಾರುಣ ಘಟನೆ ನಡೆದಿದೆ.


  ಮೃತ ಬಾಲತಕಿಯನ್ನು ಐದು ವರ್ಷದ ಕಾಮಿನಿ ಎಂದು ಗುರುತಿಸಲಾಗಿದೆ. ಬಾಲಕಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿ ಕಾರ್ಟೂನ್ ನೋಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ಅವಳ ಕೈಯಿಂದ ಫೋನ್ ಬಿದ್ದಿತು ಮತ್ತು ಮಗು ಪ್ರಜ್ಞೆ ತಪ್ಪಿತು. ಕೂಡಲೇ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

  ಆಕೆಯ ಸಾವಿಗೆ ಹೃದಯ ಸ್ತಂಭನವೇ ಕಾರಣ ಎಂದು ಹಸನ್‌ಪುರ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ಧ್ರುವೇಂದ್ರ ಕುಮಾರ್‌ ತಿಳಿಸಿದ್ದಾರೆ.ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಹಸ್ತಾಂತರಿಸುವಂತೆ ವೈದ್ಯರು ಮತ್ತು ಅಧಿಕಾರಿಗಳು ಕುಟುಂಬಕ್ಕೆ ಮನವಿ ಮಾಡಿದರು ಆದರೆ ಅವರು ನಿರಾಕರಿಸಿದರು. ಸಾವಿಗೆ ಹೃದಯಾಘಾತವೇ ಕಾರಣವೇ ಅಥವಾ ಬೇರೆ ಯಾವುದಾದರೂ ಕಾಯಿಲೆಯೇ ಎಂಬುದು ತನಿಖೆಯ ಅಗತ್ಯವಿದೆ ಎಂದು ಅಮ್ರೋಹಾ ಮುಖ್ಯ ವೈದ್ಯಾಧಿಕಾರಿ ಸತ್ಯಪಾಲ್ ಸಿಂಗ್ ಹೇಳಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply