Connect with us

    LATEST NEWS

    ನನ್ನ ಹೆಸರಲ್ಲೇ ರಾಮನಿದ್ದಾನೆ..ನಮ್ಮೂರಿನ ರಾಮಮಂದಿರಕ್ಕೆ ದೇಣಿಗೆ ನೀಡುತ್ತೆನೆ – ಸಿದ್ದರಾಮಯ್ಯ

    ಉಡುಪಿ ಫೆಬ್ರವರಿ 22: ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಜನ ವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸಲು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಫೆಬ್ರವರಿ 22 ಸೋಮವಾರ ಆರು ದಿನಗಳ ಜನಧ್ವನಿ ಪಾದಯಾತ್ರೆಯನ್ನು ಹೆಜಮಾಡಿಯಲ್ಲಿ ಪ್ರಾರಂಭಿಸಿದೆ. ಈ ಪಾದಯಾತ್ರೆಯಲ್ಲಿ ಪಾಲ್ಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪ ವಿರುದ್ದ ಹರಿಹಾಯ್ದರು.


    ಸಿಎಂ ಯಡಿಯೂರಪ್ಪ ಡೋಂಗಿ ರೈತನ ಮಗನಾಗಿದ್ದು, ರೈತರ ಮೇಲೆ ಗೋಲಿಬಾರ್ ಮಾಡಿ ಕೊಂದು ಹಾಕಿದ್ದು, ಹಸಿರು ಶಾಲು ಹಾಕಲು ಯಡಿಯೂರಪ್ಪಗೆ ನೈತಿಕತೆ ಇಲ್ಲ, ಅಕ್ಕಿಯನ್ನು ಎರಡು ಕೆಜಿಗೆ ಇಳಿಸಿದ ಬಿಜೆಪಿಯನ್ನು ರಾಜ್ಯದ ಜನ ಕಿತ್ತೊಗೆಯಬೇಕು ಎಂದರು.


    ನಾನು ಅಯೋಧ್ಯೆ ರಾಮ ಮಂದಿರಕ್ಕೆ ದುಡ್ಡು ಕೊಡಲ್ಲ ಎಂದಿದ್ದೆ ಅಷ್ಟೇ ಅದರಲ್ಲಿ ವಿವಾದ ಮಾಡುವಂತಹದ್ದೇನಿದೆ. ನಮ್ಮೂರಿನ ರಾಮಮಂದಿರಕ್ಕೆ ದುಡ್ಡು ಕೊಡುತ್ತೇನೆ, ಅಯೋಧ್ಯೆಯಲ್ಲಿ ಕಟ್ಟೋದು ದಶರಥನ ಮಗನದ್ದೇ ದೇಗುಲ, ನಮ್ಮೂರಲ್ಲಿ ಕಟ್ಟುವ ರಾಮಮಂದಿರ ಕೂಡಾ ದಶರಥನ ಮಗನಿಗೇ ಎಂದು ಹೇಳಿದರು. ಇನ್ನು ಜಾತಿ ಮೀಸಲಾತಿ ಸಂಬಂಧಿಸಿದಂತೆ ಸರಕಾರ ಸಂವಿಧಾನಾತ್ಮಕವಾಗಿ ಶೀಘ್ರ ತೀರ್ಮಾನ ಮಾಡಲಿ ಎಂದರು.

     

    ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್ 5 ಕೋಟಿ ಹಣವನ್ನು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ನನಗೂ ಮನ್ಸೂರ್ ಗೂ ಯಾವುದೇ ಸಂಬಂಧ ಇಲ್ಲ, ಯಾರಿಗೋ ಕೊಟ್ಟು ನನಗೆ ಕೊಟ್ಟಿದ್ದಾನೆ ಅಂದರೆ ಏನು ಪ್ರಯೋಜನ, ಅವನು ಯಾರಿಗೆ ಕೊಟ್ಟಿದ್ದಾರೆ ಅವನಿಂದ ವಸೂಲಿ ಮಾಡಿ, ಐ ಡೋಂಟ್ ನೋ ನಾನು ಯಾರಿಂದಲೂ 5 ಪೈಸೆ ಪಡೆದಿಲ್ಲ ಎಂದ ಅವರು ನನಗೆ ಮನ್ಸೂರ್ ನಿಂದ ಹಣ ಪಡೆಯುವ ಅಗತ್ಯವೂ ಇಲ್ಲ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply