LATEST NEWS
ಧರ್ಮಸ್ಥಳದ ಶಾಂತಿವನದಲ್ಲಿ ಸಮ್ಮಿಶ್ರ ಸರಕಾರದ ಭವಿಷ್ಯ ನುಡಿದ ಸಿದ್ದರಾಮಯ್ಯ

ಧರ್ಮಸ್ಥಳದ ಶಾಂತಿವನದಲ್ಲಿ ಸಮ್ಮಿಶ್ರ ಸರಕಾರದ ಭವಿಷ್ಯ ನುಡಿದ ಸಿದ್ದರಾಮಯ್ಯ
ಧರ್ಮಸ್ಥಳ ಜೂನ್ 26: ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆಯಲ್ಲಿರುವ ಸಿದ್ದರಾಮಯ್ಯ ಅವರು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ರಾಜ್ಯದ ಸಮ್ಮಿಶ್ರ ಸರಕಾರ ಭವಿಷ್ಯ ಕೇವಲ ಲೋಕಸಭೆ ಚುನಾವಣೆಯವರೆಗೂ ಮಾತ್ರ ಎಂದು ಹೇಳುವ ಮೂಲಕ ರಾಜ್ಯ ಸಮ್ಮಿಶ್ರ ಸರಕಾರ 5 ವರ್ಷ ಬಾಳಲ್ಲ ಎಂಬ ಸ್ಟೋಟಕ ಮಾಹಿತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೊನ್ನೆಯಷ್ಟೇ ಸಮ್ಮಿಶ್ರ ಸರಕಾರದ ಬಜೆಟ್ ಕುರಿತು ಹೇಳಿಕೆ ನೀಡಿ ರಾಜ್ಯ ರಾಜಕೀಯದಲ್ಲಿ ಸಂಚಲ ಮೂಡಿಸಿದ್ದ ಸಿದ್ದರಾಮಯ್ಯ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ.
ಲೋಕಸಭೆ ಚುನಾವಣೆಯ ಕುರಿತು ಲೋಕಾಭಿರಾಮವಾಗಿ ಮಾತನಾಡಿದ ಸಿದ್ದರಾಮಯ್ಯ ಈ ಸಲ ಚುನಾವಣೆಯಲ್ಲಿ ಮೋದಿ ಬರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ರಾಜ್ಯ ಸಮ್ಮಿಶ್ರ ಸರಕಾರದ ಭವಿಷ್ಯದ ಬಗ್ಗೆ ಮಾತನಾಡಿದ ಅವರು ಹಾಂ… ಐದು ವರ್ಷನಾ… ಲೋಕಸಭೆ ಚುನಾವಣೆ ಆದ್ಮೇಲೆ ನೋಡೋಣ. ಲೋಕಸಭೆ ಚುನಾವಣೆವರೆಗೂ ಮೈತ್ರಿ ಸರ್ಕಾರ ಇರುತ್ತೆ, ನಂತರ ಬೆಳವಣಿಗೆ ಏನಾಗುತ್ತೋ ನೋಡೋಣ. ಇದೇ ಸಂದರ್ಭದಲ್ಲಿ ಈ ಸಲ ಮೋದಿ ಬರೋದಿಲ್ಲ, ತಿಪ್ಪರಲಾಗ ಹಾಕಿದ್ರೂ ಗೆಲ್ಲೋದಿಲ್ಲ. ಎಲ್ಲರೂ ಒಂದಾಗಿಬಿಡೋದ್ರಿಂದ ಮೋದಿ ಗೆಲ್ಲೋಕ್ಕಾಗಲ್ಲ ಎಂದಿದ್ದಾರೆ. ಈ ಮಾತಿನಿಂದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಲೋಕಸಭೆ ಚುನಾವಣೆಗಾಗಿ ಮಾಡಿಕೊಂಡ ಮೈತ್ರಿ ಎಂಬಂತಿದೆ.