DAKSHINA KANNADA
ಎಸೈ ಗೆ ಬಾರಿಸಿದ ಪೇದೆ
ಎಸೈ ಗೆ ಬಾರಿಸಿದ ಪೇದೆ
ಪುತ್ತೂರು,ಸೆಪ್ಟಂಬರ್ 26: ಪುತ್ತೂರಿನಲ್ಲಿ ಎಸ್.ಐ ಹಾಗೂ ಪೇದೆ ಪರಸ್ಪರ ಹೊಡೆದಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಿಂದೂ ಸಂಘಟನೆಗಳ ವಿರೋಧ ಹಾಗೂ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತರ ಅವಮಾನಕಾರಿ ಭಾಷಣದ ಬಳಿಕ ರಾಜ್ಯದಲ್ಲಿ ಸುದ್ಧಿಯಾಗಿದ್ದ ಇನ್ಸ್ ಪೆಕ್ಟರೇ ಪೇದೆಯಿಂದ ಪೆಟ್ಟು ತಿಂದಿದ್ದಾರೆ. ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯ ಪೇದೆಯಾಗಿದ್ದ ಸತೀಶ್ ನಾಯ್ಕ ಗೆ ಠಾಣೆಯ ಎಸ್.ಐ ಅಬ್ದುಲ್ ಖಾದರ್ ನಿರಂತರ ಅವಹೇಳನ ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಎರಡು ವಾರದ ಹಿಂದೆ ಬೆಳಿಗ್ಗೆ ಠಾಣೆಯಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದೆ. ಠಾಣೆಯ ಒಂದು ಮೂಲದ ಪ್ರಕಾರ ಎಸ್.ಐ ಅಬ್ದುಲ್ ಖಾದರ್ ಪೇದೆಯಾಗಿದ್ದ ಸತೀಶ್ ಅವರನ್ನು ಅವಹೇಳನಕಾರಿಯಾಗಿ ಬೈದಿದ್ದರು. ಆ ಕಾರಣಕ್ಕಾಗಿ ಕೋಪ ನೆತ್ತಿಗೇರಿಸಿಕೊಂಡಿದ್ದ ಸತೀಶ್ ಎಸ್.ಐ ಯವರು ಬೆಳಿಗ್ಗೆ ಠಾಣೆಗೆ ಬರುತ್ತಿದ್ದಂತೆ ಅವರ ಕಾಲರ್ ಹಿಡಿದು ಚೆನ್ನಾಗಿ ಬಿಗಿದಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಎಸ್.ಐ ಹಾಗೂ ಸತೀಶ್ ನಡುವೆ ಮಾರಾಮಾರಿಯೂ ನಡೆದಿದ್ದು, ಇಬ್ಬರೂ ನೆಲದಲ್ಲಿ ಉರುಳಾಡಿಕೊಂಡು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೊಂದು ಮೂಲದ ಪ್ರಕಾರ ಪೇದೆ ಸತೀಶ್ ರ ಕುಡಿತವನ್ನು ಪ್ರಶ್ನಿಸಿದ್ದಕ್ಕಾಗಿ ಈ ಘಟನೆ ನಡೆದಿದೆ ತಿಳಿದುಬಂದಿದೆ. ಘಟನೆಯ ಬಳಕ ಪೇದೆ ಸತೀಶ್ ನನ್ನು ಇಮಿಡಿಯೇಟ್ ಆಕ್ಷನ್ ಆಗಿ ಧರ್ಮಸ್ಥಳ ಪೋಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಪೋಲೀಸರು ಪರಸ್ಪರ ಹೊಡೆದಾಡಿಕೊಂಡ ವಿಚಾರ ಪೋಲೀಸ್ ಠಾಣೆಯಲ್ಲಿದ್ದ ಪೋಲೀಸರಿಗೆ ಬಿಟ್ಟು, ಠಾಣೆಯ ಹತ್ತಿರವೇ ಇರುವ ಕೆಲವು ವ್ಯಕ್ತಿಗಳ ಗಮನಕ್ಕೂ ಬಂದಿದೆ. ಇದೀಗ ಈ ವಿಚಾರ ಸಾರ್ವಜನಿಕವಾಗಿ ಹರಿದಾಡುತ್ತಿದೆ.
You must be logged in to post a comment Login