Connect with us

LATEST NEWS

ಸೂಲಿಬೆಲೆ ನಿಂದನೆ ಪ್ರಕರಣ : ರೈ ವಿರುದ್ದ ಕೋರ್ಟಿನಲ್ಲಿ ದೂರು ದಾಖಲು

ಸೂಲಿಬೆಲೆ ನಿಂದನೆ ಪ್ರಕರಣ : ರೈ ವಿರುದ್ದ ಕೋರ್ಟಿನಲ್ಲಿ ದೂರು ದಾಖಲು
ಮಂಗಳೂರು,ಸೆಪ್ಟೆಂಬರ್ 26 : ಚಿಂತಕ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆಗೆ ಅರಣ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವಮಾನ ಪ್ರಕರಣಕ್ಕೆರ ಸಂಬಂಧಿದಂತೆ ಮಂಗಳೂರು ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚೀಲ್ ಅವರು ಈ ದೂರನ್ನು ದಾಖಲಿಸಿದ್ದಾರೆ. ಸೆಪ್ಟೆಂಬರ್‌ 22 ರಂದು ಉಳ್ಳಾಲದ ಅಸೈಗೋಲಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಚಕ್ರವರ್ತಿ ಸೂಲಿಬೆಲೆಯನ್ನು ಸಚಿವ ಬಿ. ರಮಾನಾಥ ರೈ ಅವರು ಸಾರ್ವಜನಿಕವಾಗಿ ನಿಂದಿಸಿದ್ದರು.
ಈ ಹಿನ್ನೆಲೆಯಲ್ಲಿ ರಹೀಂ ಉಚ್ಚಿಲ್ ಅವರು ಮಂಗಳೂರು ಪ್ರಥಮ ದರ್ಜೆ ( 2 ನೇ ಕೋರ್ಟ್ )ನ್ಯಾಯಿಕ ದಂಡಾಧಿಕಾರಿಗೆ  ಖಾಸಾಗಿ ದೂರು ನೀಡಿ, ಸಚಿವ ರಮಾನಾಥ ರೈ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು. ದೂರುದಾರರು ಮತ್ತು ಪ್ರತಿವಾದಿಗಳ ವಾದವನ್ನು ಆಲಿಸಿದ ನ್ಯಾಯಧೀಶರು ನಾಳೆ ಮಧ್ಯಾಹ್ನಕ್ಕೆ ತೀಪರ್ನ್ನು ಮುಂದೂಡಿದ್ದಾರೆ.